ಹುಬ್ಬಳ್ಳಿ: ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಸವರಾಜ ಕೆಲಗೇರಿ ಎಂಬುವವರ ಪತ್ನಿ ನಾನು ಎಂದು ಹೇಳಿಕೊಳ್ಳುತ್ತಿದ್ದ ಅನಿತಾ ರೇವಣಕರ ಎಂಬ ಮಹಿಳೆ ಶಾಂತಿನಗರದ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಬಿಜೆಪಿ ಮುಖಂಡ ಬಸವರಾಜ್ ಕೆಲಗೇರಿ ಎಂಬಾತ ತನ್ನ ಗಂಡನೆಂದು ಹೇಳಿಕೊಂಡು ರಂಪಾಟ ಮಾಡಿ ಆತನಮನೆ ಮುಂದೆ ಜಗಳ ನಡೆಸಿದ್ದಳು. ಬಸವರಾಜ್ ಹಾಗೂ ಆತನ ಮನೆಯವರು ಬೀದಿಯಲ್ಲಿ ಓಡಾಡಿಸಿ ಹಲ್ಲೆ ನಡೆಸಿದ್ದರು.
ಈ ಎಲ್ಲ ಘಟನೆಗಳು ನಡೆದು ಇನ್ನೂ ತಿಂಗಳು ಕಳೆದಿಲ್ಲ ಅಷ್ಟರಲ್ಲಿ ಅನಿತಾ, ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ತನಗೆ ಸಹಾಯ ಮಾಡುವ ನೆಪದಲ್ಲಿಯೂ ಹಣವನ್ನ ಪೀಕಲಾಗಿದೆ ಎಂಬುದನ್ನು ಹೆಸರು ಸಮೇತ ನಮೂದು ಮಾಡಿದ್ದಾರೆನ್ನುವುದು ಗೊತ್ತಾಗಿದೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
26/09/2020 03:30 pm