ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮದ್ವೆಯಿಂದ ವಾಪಸ್ ಬರುವುದರಲ್ಲೇ ಮನೆಯಲ್ಲಿದ್ದ ಚಿನ್ನಾಭರಣ ಕಳವು..!

ಹುಬ್ಬಳ್ಳಿ: ಮನೆಯವರು ಮದುವೆಗೆ ತೆರಳಿ ವಾಪಸ್ ಬರುವುದರೊಳಗೆ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ರೇಷ್ಮೆ ಸೀರೆಗಳು ಕಳ್ಳತನವಾದ ಘಟನೆ ಹುಬ್ಬಳ್ಳಿಯ ಆದರ್ಶನಗರದಲ್ಲಿ ನಡೆದಿದೆ.

ನೀರಾವರಿ ಇಲಾಖೆಯ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹಾದೇವಪ್ಪ ಭೀಮಕ್ಕನವರ ಎಂಬವರ ಮನೆಯಲ್ಲೇ ಕಳ್ಳತನ ನಡೆದಿದ್ದು, 380 ಗ್ರಾಂ ಚಿನ್ನ, 15 ಕೆಜಿ ಬೆಳ್ಳಿ, 10 ಬೆಲೆಬಾಳುವ ರೇಷ್ಮೆ ಸೀರೆ, ಸಾವಿರಾರು ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಘಟನೆ ನಡೆದಿದ್ದು, ಮದುವೆಗಾಗಿ ಮನೆಯವರು ತೆರಳಿ ಮರಳಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಅಶೋಕ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಸ್ವತಃ ಪೊಲೀಸ್ ಕಮೀಷನರ ಲಾಬುರಾಮ್ ಕಳ್ಳತನವಾದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕಮಿಷನರ್ ಲಾಬುರಾಮ್, ತಕ್ಷಣವೇ ಸಾಕ್ಷಿಗಳಿಗಾಗಿ ಹುಡುಕಾಟ ನಡೆಸಿದ್ದು, ತನಿಖೆ ನಡೆಸುತ್ತಿದ್ದೇವೆ. ಈ ಕುರಿತು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

Edited By : Vijay Kumar
Kshetra Samachara

Kshetra Samachara

20/12/2020 06:54 pm

Cinque Terre

48.38 K

Cinque Terre

5

ಸಂಬಂಧಿತ ಸುದ್ದಿ