ಹುಬ್ಬಳ್ಳಿ: ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಕುರುಡೀಕೇರಿ ಬಸ್ ನಿಲ್ದಾಣದಲ್ಲಿ ಮಾರಾಟ ಮಾಡುತ್ತಿದ್ದ ಇಂದೂಬಾಯಿ ಜಾಧವ ಬಂದಿತ ಮಹಿಳೆಯಾಗಿದ್ದಾರೆ.ಬಂಧಿತ ಆರೋಪಿಯಿಂದ 1788 ರೂಪಾಯಿ ಮೌಲ್ಯದ ಸಾರಾಯಿ ಪ್ಯಾಕೆಟ್ ಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತ ಮಹಿಳೆ ಕುರುಡೀಕೇರಿ ಗ್ರಾಮದ ನಿವಾಸಿಯಾಗಿದ್ದು,ಹುಬ್ಬಳ್ಳಿಯ ಗ್ರಾಮೀಣ ಇನ್ಸ್ ಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದಲ್ಲಿ ಕಾರ್ಯಾಚರಣೆ ಮೂಲಕ ಬಂಧಿಸಲಾಗಿದೆ.
ಅಲ್ಲದೇ ಬಂಧಿತ ಮಹಿಳೆಯಿಂದ ಬೇರೆ ಬೇರೆ ಬ್ರ್ಯಾಂಡ್ ನ ಸಾರಾಯಿ ಪ್ಯಾಕೆಟ್ ಗಳು ವಶಕ್ಕೆ ಪಡೆದುಕೊಂಡಿದ್ದು,ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/12/2020 11:39 am