ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ವಿನಾಯಕ ಲಾಡ್ಜ್ ದಲ್ಲಿ ಆತ್ಮಹತ್ಯೆ ಮಾಡಿಕೊಂಡ ಆಂದ್ರ ಪ್ರದೇಶದ ವ್ಯಕ್ತಿ

ಹುಬ್ಬಳ್ಳಿ- ಕಳೆದ ಹಲವು ದಿನದ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ವಿನಾಯಕ ರೆಸಿಡೆನ್ಸಿ ಲಾಡ್ಜನಲ್ಲಿ ನಡೆದಿದ್ದು, ಈಗ ಪ್ರಕರಣ ಬೆಳಕಿಗೆ ಬಂದಿದೆ.

ಆಂದ್ರಪ್ರದೇಶದ ಚಿತ್ತೂರ ಜಿಲ್ಲೆಯ ಪಾಂಚಾಲಿನಗರದ, ಡಬ್ಬು ಗುಂಟಾ ರಾಜೇಂದ್ರ ಎಂಬಾತನೇ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದು, ಯಾವ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದಾನೆಂಬುದರ ಬಗ್ಗೆ ಉಪನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಲು ಆರಂಭಿಸಿದ್ದಾರೆ..

ವಿನಾಯಕ ರೆಸಿಡೆನ್ಸಿಯ ರೂಮ್ ಸಂಖ್ಯೆ 106ರಲ್ಲಿನ ಡಿಸೆಂಬರ್ 11ರಿಂದ ರೂಮ್ ಮಾಡಿಕೊಂಡಿದ್ದ. ಪ್ರತಿದಿನವೂ ಬೆಳಿಗ್ಗೆ ಹೊರಗಡೆ ಹೋಗುತ್ತಿದ್ದ ಈ ವ್ಯಕ್ತಿ, ಇಳಿಸಂಜೆ ಮತ್ತೆ ರೂಮಿಗೆ ಬಂದು ತಂಗುತ್ತಿದ್ದ.

ಮಧ್ಯಾಹ್ನದ ವೇಳೆಯಲ್ಲಿ ಎಲ್ಲಿಗೆ ಹೋಗುತ್ತಿದ್ದ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಮೃತ ರಾಘವೇಂದ್ರ ರೂಮಿನಲ್ಲಿನ ಪ್ಯಾನಿಗೆ ಬಟ್ಟೆಯನ್ನ ಹಗ್ಗದ ಮಾಡಿಕೊಂಡು ನೇಣು ಹಾಕಿಕೊಂಡಿದ್ದಾನೆ.

ರೆಸಿಡೆನ್ಸಿಯ ರೂಮ್ ಬಾಯ್ ಬಾಗಿಲು ಬಡಿದಾಗ, ಬಾಗಿಲು ತೆಗೆಯದೇ ಇದ್ದಾಗ, ಕಿಡಕಿಯಿಂದ ನೋಡಿದಾಗ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ.

ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮವನ್ನ ಜರುಗಿಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

18/12/2020 08:13 pm

Cinque Terre

37.13 K

Cinque Terre

0

ಸಂಬಂಧಿತ ಸುದ್ದಿ