ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗ್ರಾ.ಪಂ ಚುನಾವಣೆ ಯಲಿವಾಳದ ಮತಗಟ್ಟೆಗೆ ವಾಮಾಚಾರ

ಕುಂದಗೋಳ : ತಾಲೂಕಿನ ಯಲಿವಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿರುವ ಆಲದ ಮರಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಯಾರೋ ವಾಮಾಚಾರದ ಗಂಟನ್ನು ಕಟ್ಟಿ ಹಾಕಿರುವ ಶಂಕೆ ವ್ಯಕ್ತವಾಗಿದೆ.

ಯಲಿವಾಳ ಗ್ರಾಮ ಪಂಚಾಯಿತಿ ಚುನಾವಣೆಯ ಮೂರು ಮತಗಟ್ಟೆಯನ್ನ ಒಳಗೊಂಡಿರುವ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿರುವ ಆಲದ ಮರಕ್ಕೆ ಕೆಂಪು ವಸ್ತ್ರದಲ್ಲಿ ನಿಂಬೆ ಹಣ್ಣು ಸೇರಿದಂತೆ ಇತರ ವಸ್ತುಗಳನ್ನ ಸೇರಿಸಿ ವಾಮಾಚಾರದ ಗಂಟನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಚುನಾವಣೆ ಗೆಲ್ಲುವ ತಂತ್ರಗಾರಿಕೆಗಾಗಿ ಕೆಲವರು ವಾಮಾಚಾರದ ಮೋರೆ ಹೋಗಿ ಈ ಕೆಲಸ ಮಾಡಿದ್ದಾರೆ ಎನ್ನುತ್ತಲಿದ್ದಾರೆ.

ಸದ್ಯ ಗ್ರಾಮಸ್ಥರು ಮರಕ್ಕೆ ಕಟ್ಟಿ ಹಾಕಿದ್ದ ವಾಮಾಚಾರದ ಗಂಟನ್ನು ತೆಗೆದು ಊರ ಹೊರಗಿನ ಹಳ್ಳದ ಬಳಿಗೆ ಒಯ್ದು ಸುಟ್ಟು ಹಾಕಿ ಗ್ರಾಮಕ್ಕೆ ಮರಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

18/12/2020 01:06 pm

Cinque Terre

61.97 K

Cinque Terre

2

ಸಂಬಂಧಿತ ಸುದ್ದಿ