ಹುಬ್ಬಳ್ಳಿ: ಪತ್ನಿಯ ಜೊತೆ ಮೊಬೈಲ್ ನಲ್ಲೆ ಮಾತುನಾಡುತ್ತಲೇ ಪಶ್ಚಿಮಬಂಗಾಳ ಮೂಲದ ಕಾರ್ಮಿಕನೊಬ್ಬ ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮೋಹನಸಿಂಗ್
ತಂದೆಯ ಸಾವಿನಿಂದ ಮನನೊಂದು ಗರ್ಭಿಣಿ ಹೆಂಡತಿಯ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಳೆದ ಎರಡು ತಿಂಗಳ ಹಿಂದೆ ಪಶ್ಚಿಮ ಬಂಗಾಳದಿಂದ ಕೆಲಸಕ್ಕೆಂದು ಬಂದು ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಫೇವರ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಮೋಹನಸಿಂಗ್ ತಂದೆಯ ಸಾವಿನ ನಂತರ ಮನನೊಂದಿದ್ದ. ತಂದೆಯ ಸಾವಿನ ದುಃಖದಲ್ಲೆ ತನ್ನ ತುಂಬು ಗರ್ಭಿಣಿ ಹೆಂಡತಿಯ ಜೊತೆ ಮಾತನಾಡುತ್ತಲೇ ತಾನು ನೇಣಿಗೆ ಶರಣಾಗಿದ್ದಾನೆ.
ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಗಂಡನ ಮಾತುಗಳನ್ನ ಕೇಳಿದ ಪತ್ನಿ ಕೂಡಲೇ
ಗಂಡನ ಜೊತೆ ಕೆಲಸ ಮಾಡುವ ಸಹ ಕಾರ್ಮಿಕ ಶುಭಾಷಿನ ಎಂಬಾತನಿಗೆ ಕರೆ ಮಾಡಿ ನನ್ನ ಗಂಡ ಹೀಗೆ ಮಾಡುತ್ತಿದ್ದಾನ್ನೇ ಎಂದು ಹೇಳಿದ್ದಾಳೆ. ಅಷ್ಟರಲ್ಲಿಯೇ ಅಲ್ಲಿಗೆ ಹೋದ ಸಹ ಕಾರ್ಮಿಕರು ನೇಣಿನಲ್ಲಿದ್ದವನನ್ನು ಕೆಳಗಿಳಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದರು ಚಿಕಿತ್ಸೆ ಫಲಕಾರಿಯಾಗದೇ ಕಾರ್ಮಿಕ ಮೃತಪಟ್ಟಿದ್ದಾನೆ.
ಘಟನೆಯ ಬಗ್ಗೆ ಕಾರ್ಮಿಕನ ಕುಟುಂಬಕ್ಕೆ ಗ್ರಾಮೀಣ ಪೊಲೀಸರು ಮಾಹಿತಿ ನೀಡಿದ್ದು, ಶವವನ್ನ ಕಿಮ್ಸನ ಶವಾಗಾರದಲ್ಲಿಡಲಾಗಿದೆ. ಪ್ರಕರಣ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
08/12/2020 09:43 am