ಕುಂದಗೋಳ : ಶೌಚಾಲಯ, ವಸತಿ ಯೋಜನೆ, ನರೇಗಾ ಯೋಜನೆಯ ನಿಧಿ ಮತ್ತು 14 ನೇ ಹಣಕಾಸು ಸೇರಿದಂತೆ ತರ್ಲಘಟ್ಟ ಗ್ರಾಮ ಪಂಚಾಯಿತಿ ರೂಪಿಸಲಾಗಿರುವ ಅನೇಕ ಯೋಜನೆಗಳಲ್ಲಿ ಸಿಬ್ಬಂದಿಗಳು ಕೋಟ್ಯಾಂತರ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಎಂದು ಸಿದ್ಧಣ್ಣ ಕಳಸಣ್ಣನವರ ಬಹಿರಂಗವಾಗಿ ಆರೋಪ ಮಾಡಿದರು.
ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಇತ್ತಿಚೆಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಶೌಚಾಲಯ ನಿರ್ಮಾಣದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಒಂದೇ ಕುಟುಂಬಕ್ಕೆ 4-5 ಬಾರಿ ಶೌಚಾಲಯ ವ್ಯವಸ್ಥೆ ನೀಡಲಾಗಿದೆ.
ಶೌಚಾಲಯ ಕಟ್ಟಿಸದೆ ಸುಖಾ ಸುಮ್ಮನೆ ಫಲಾನುಭವಿಗಳಿಗೆ ಹಣ ನೀಡಲಾಗಿದೆ. ನರೇಗಾ ಯೋಜನೆಯಡಿ ಅವ್ಯವಹಾರ ನಡೆದಿದ್ದು, ಕಾಮಗಾರಿಗಳಿಗೆ ಮನೆ ಬಂದಂತೆ ಪಂಚಾಯ್ತಿ ಬಿಲ್ ಪಾಸ್ ಮಾಡಿದೆ.
14ನೇ ಹಣಕಾಸಿನಲ್ಲೂ ಎಲ್ಲಿಲ್ಲದ ಹಣ ಕಬಳಿಸಿದ್ದು, ವಸತಿ ಯೋಜನೆಯಡಿ 13 ರಿಂದ 14 ಲಕ್ಷ ರೂಪಾಯಿ ವಂಚಿಸಲಾಗಿದೆ. ಇಷ್ಟಲ್ಲದೆ ಸತ್ತವರ ಹೆಸರಲ್ಲೂ ಬಿಲ್ ಪಾಸ್ ಮಾಡಲಾಗಿದೆ.
ಈ ಬಗ್ಗೆ ಪ್ರಶ್ನಿಸಿದವರ ವಿರುದ್ಧ ಪಂಚಾಯ್ತಿಯವರು ಹರಿಹಾಯುತ್ತಾರೆಂದು ಸಿದ್ಧಣ್ಣ ಆರೋಪ ಮಾಡಿದರು.
ಈಗಾಗಲೇ ಈ ಬಗ್ಗೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತ, ಬೆಳಗಾವಿ ಆಯುಕ್ತ ವಿಭಾಗಗಳಲ್ಲಿ ಮನವಿ ಸಲ್ಲಿಸಿ ಲೋಕಾಯುಕ್ತರಿಗೆ ಸಮಸ್ಯೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಈ ಬಗ್ಗೆ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಡಿವೆಪ್ಪ ಹೆಬಸೂರು, ನೀಲಕಂಠಪ್ಪ ಬೂದಿಹಾಳ, ಹಾಗೂ ಯಮನಪ್ಪ ಕೊಡತಗೇರಿ ಉಪಸ್ಥಿತರಿದ್ದರು.
Kshetra Samachara
28/11/2020 12:44 pm