ಹುಬ್ಬಳ್ಳಿ:ಅಧಿಕಾರಿಗಳಿಗೆ ನೀಡುವಷ್ಟು ಗೌರವ, ಅವರ ಇಲಾಖೆಯ ವಾಹನಕ್ಕೂ ಗೌರವ ಇರುತ್ತದೆ. ಇಲಾಖೆ ವಾಹನ ಹೋಗುವಾಗ ಆ ವಾಹನದಲ್ಲಿ ಅಧಿಕಾರಿ ಇರಲಿ ಅಥವಾ ಇರದೇ ಇರಲಿ ಆ ಸಮಯದಲ್ಲಿ ಎದುರಿಗೆ ಇದ್ದ ಸಿಬ್ಬಂದಿ ಅಧಿಕಾರಿಯವರಿದ್ದ ಇಲಾಖೆಯ ವಾಹನಕ್ಕೆ ಸಲ್ಯೂಟ್ ಮಾಡಿ ಗೌರವ ಸಲ್ಲಿಸುತ್ತಾರೆ.ಆದರೆ ಶಿರಸಿ ವಿಭಾಗದ ಅರಣ್ಯ ಅಧಿಕಾರಿಗಳ ವಾಹನದ ಮೇಲೆ ಯುವತಿ ವಿವಿಧ ಭಂಗಿಗಳಲ್ಲಿ ಪೋಟೋ ಶೂಟ್ ಮಾಡಿಸಿದ್ದು, ಫೋಟೋ ಶೂಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು.ಶಿರಸಿ ಅರಣ್ಯ ವಿಭಾಗದ ಅರಣ್ಯ ಅಧಿಕಾರಿಯ ಇಲಾಖೆ ವಾಹನ ದುರ್ಬಳಕೆಯಾಗಿದ್ದು,ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ವಿಷಯದ ಬಗ್ಗೆ ಮಾಹಿತಿ ಇದ್ದರೂ ಮೌನ ತಾಳಿದ್ದಾರೆ.ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಜಾಣ ಕುರುಡರಂತೆ ವರ್ತನೆ ಮಾಡುತ್ತಿದ್ದಾರೆ.ಅರೆಬರೆ ಬಟ್ಟೆಯಲ್ಲಿ ಪೋಟೋ ಶೂಟ್ ಮಾಡಿದ್ದು,ಸರ್ಕಾರ ವಾಹನ ಕೊಟ್ಟಿರುವುದು ಏಕೆ..? ಅಧಿಕಾರಿಗಳು ಮಾಡಿದ್ದೆನೂ..? ಎಂಬುವಂತ ಪ್ರಶ್ನೆ ಉದ್ಬವಿಸಿದೆ.
ಅರಣ್ಯ ಇಲಾಖೆಯ ವಾಹನ ದುರ್ಬಳಕೆ ಮಾಡಿಕೊಂಡ ಯುವತಿ ಯಾರು..?ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿದ್ದು,ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.
Kshetra Samachara
27/11/2020 12:45 pm