ಅಣ್ಣಿಗೇರಿ : ಮನೆಯಲ್ಲಿ ಯಾರೂ ಇರದದ್ದನ್ನು ಗಮನಿಸಿದ ಖದೀಮರು, ಮನೆ ಬಾಗಿಲು ಕೀಲಿ ಮುರಿದು ಒಳಗೆ ನುಗ್ಗಿ, ಟ್ರೀಜುರ್ ಲಾಕರ್ ಕಿತ್ತೆಸೆದು ಬರೋಬ್ಬರಿ 1.45.000 ಬೆಲೆ ಬಾಳುವ ಚಿನ್ನಾಭರಣ ನಗದು ಹಣ ಕಳ್ಳತನ ಮಾಡಿದ ಘಟನೆ ಶನಿವಾರ ಮತ್ತು ರವಿವಾರದ ನಡುವಿನ ಅವಧಿಯಲ್ಲಿ ನಲವಡಿ ಗ್ರಾಮದಲ್ಲಿ ನಡೆದಿದೆ.
ನಲವಡಿ ಗ್ರಾಮದ ಬಸಪ್ಪ ಬನಪ್ಪ ಕುಂದಗೋಳ ಇವರ ಬಾಬತ್ತಿನಲ್ಲಿದ್ದ 10 ಗ್ರಾಂ ಬಂಗಾರದ ಚೈನ್, 10 ಗ್ರಾಂ ಬೋರಮಳ್ ಸರ, 10 ಗ್ರಾಂ ಝಮುಕಿ, ಬೆಂಡವಾಲಿ, ಕಿವಿಯೋಲೆ ಡ್ರಾಪ್ಸ್ ಮುರುವು 10 ಗ್ರಾಂ, ಹಾಗೂ ಬೆಳ್ಳಿಯ ಗುಣಗಡಗಿ, ಕಾಲು ಚೈನು, ಹಾಲ ಗಡಗ, ಹಾಗೂ 10.000 ನಗದು ಹಣ ಸೇರಿ ಒಟ್ಟು 1.45.000 ರೂಪಾಯಿ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ದರೋಡೆಕೋರರು ಕೊಳ್ಳೆ ಹೊಡೆದಿದ್ದಾರೆ. ಈ ಕುರಿತು ಅಣ್ಣಿಗೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Kshetra Samachara
24/11/2020 02:44 pm