ನೋಡಿ ಈಗ ನಮ್ಮ ಜೈಲುಗಳು ಸ್ಮಾರ್ಟ ಆಗ್ತಾ ಇವೆಯಂತೆ. ಅಲ್ಲಿಯ ವಿಐಪಿ ಕೈದಿಗಳ ಕೈಯಲ್ಲಿ ಸ್ಮಾರ್ಟ್ ಫೋನ್ ರಿಂಗಣಿಸ್ತಾದೆ ಇದಾವೆ. ಈಗ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮಂತ್ರಿ ವಿನಯ ಕುಲಕರ್ಣಿ ಕೈಯಲ್ಲಿ ಸ್ಮಾರ್ಟ್ ಫೋನ್ ಮಿಂಚತಾ ಇದೆಯಂತೆ. ಅವರಿಗೂ ಒಬ್ಬರೇ ಇದ್ದು ಬೇಜಾರಾಗಿರಬಹುದು, ಅದಕ್ಕೆ ಯಾರೋ ಒಬ್ಬ ಸಹ ಕೈದಿಯಿಂದ ಫೋನ್ ಪಡೆದು ಮಾತನಾಡಿದ್ದಾರೆಂಬ ಮಾತು ಕೇಳಿಬರುತ್ತಿವೆ.
ಮಾಮೂಲು ಕಳ್ಳತನ, ಕೊಲೆ ಮಾಡಿ ಕಂಬಿ ಎಣಿಸುತ್ತಿರುವ ಕೈದಿಗಳಿಂದಲೇ ಗಾಂಜಾ, ಪಿಸ್ತೂಲು, ಚಾಕು ಚೂರಿಗಳು ಜಪ್ತ ಆಗುತ್ತಿರುವಾಗ ಒಬ್ಬ ಕಾಂಗ್ರೆಸ್ಸಿನ ಪ್ರಭಾವಿ ನಾಯಕನಾಗಿರುವ ವಿನಯ ಕುಲಕರ್ಣಿ ಫೋನ್ ಉಪಯೋಗಿಸದಿದ್ದರೆ ಹೇಗೆ ಹೇಳಿ ಸ್ವಾಮಿ. ಪಾಪ ಕೂತು ಕೂತು ಬೆನ್ನು ನೋವು ಬಂದಿರ ಬಹುದು. ಬೇಜಾರು ಕಳೆಯುಲು, ಆಪ್ತರೊಂದಿಗೆ ಮಾತನಾಡಲು ಫೋನ್ ಹಿಡಿದಿದ್ದರೂ ಹಿಡಿದಿರಬಹುದು.
ಯಾವುದಕ್ಕೂ ಇದು ತನಿಖೆಯಾಬೇಕು. ವಿನಯ ಕುಲಕರ್ಣಿ ಬಂಧನದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ನಿತ್ಯ ಕುಲಕರ್ಣಿ ಮನೆ ಪ್ರವಾಸ ಕೈಗೊಳ್ಳುತ್ತಿರುವ ನಾಯಕರು ಹೇಳುವ ಒಂದೇ ಬಂದು ವಾಕ್ಯ. ಇದರಲ್ಲಿಯೂ ಬಿಜೆಪಿಯ ಕುತಂತ್ರವಿದೆ ಎಂದು ಹೇಳಿದರೂ ಹೇಳಬಹುದು.
ಏನೇ ಆಗಲಿ ಈ ಬಗ್ಗೆ ತನಿಖೆಯಾಗಬೇಕಲ್ಲವೆ?
Kshetra Samachara
24/11/2020 12:07 pm