ಕಲಘಟಗಿ: ಪಟ್ಟಣದ ನಿವಾಸಿ ತಾಲ್ಲೂಕಿನ ತಬಕದಹೊನ್ನಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರನ್ನು ಅಪರಹರಣ ಮಾಡಿರುವ ಘಟನೆ ನಡೆದಿದೆ.
ಪಟ್ಟಣದ ನಿವಾಸಿ ಮುಖ್ಯ ಶಿಕ್ಷಕರಾಗಿರುವ ಶ್ರೀಕಾಂತ ಜಾಲಿಸತಕಿ (59) ಎಂಬವರನ್ನು ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಪಹರಣ ಮಾಡಲಾಗಿದೆ. ಶ್ರೀಕಾಂತ ಅವರು ಶಾಲೆಯ ಕೆಲಸಕ್ಕೆ ಮೋಟಾರ್ ಸೈಕಲ್ ಮೇಲೆ ಹೋಗುತ್ತಿದ್ದರು. ಈ ವೇಳೆ ಹಿಂಡಸಗೇರಿ ಬೇಡ್ತಿಹಳ್ಳದ ಬ್ರಿಜ್ ಹತ್ತಿರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಕುಂದಾಪುರದ ಜಯಚಂದ್ರ ಗೋವೆಬೆಟ್ಟ ಹಾಗೂ ಬೆಳ್ತಂಗಡಿಯ ಚಾಲಕ ದಿನೇಶ್ ಎಂಬವರು ಶ್ರೀಕಾಂತ ಅವರನ್ನು ಅಡ್ಡಗಟ್ಟಿ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ಶಿಕ್ಷಕ ಶ್ರೀಕಾಂತ ಅವರ ಮಗ ಹರ್ಷಿತ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆ ಎಎಸ್ಐ ಆರ್.ಎಂ.ಸಂಕಿನದಾಸರ ಹಾಗೂ ಸಿಪಿಐ ವಿಜಯ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಕೈಗೊಂಡಿದ್ದಾರೆ.
Kshetra Samachara
19/11/2020 08:12 am