ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಬೈಲ್ ಕಳ್ಳನ ಬಂಧನ:1,72,000 ಮೌಲ್ಯದ ಮೊಬೈಲ್ ವಶಕ್ಕೆ

ಹುಬ್ಬಳ್ಳಿ: ಸಾರ್ವಜನಿಕರ ಮೊಬೈಲ್ ಕಳ್ಳತನ ಮಾಡಿ ವಂಚಿಸುತ್ತಿದ್ದ ಮೊಬೈಲ್ ಕಳ್ಳನನ್ನು ಬಂಧಿಸುವಲ್ಲಿ

ಉಪನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ರಫೀಕ್ ಧಾರವಾಡ , (35)ಆಟೋ ಚಾಲಕ ಎಂಬುವನೇ ಬಂಧಿತ ಆರೋಪಿಯಾಗಿದ್ದು, ಬಂದಿತನಿಂದ 1,72,000 ಮೌಲ್ಯದ ಒಂಬತ್ತು ಮೊಬೈಲ್ ಹಾಗೂ 50,000 ಮೌಲ್ಯದ ಒಂದು ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಧ್ಯ ಈ ಒಂದು ಪ್ರಕರಣವನ್ನು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್.ಕೆ.ಹೊಳೆಮ್ಮನವರ,ಪಿಎಸ್ ಐ ಸೀತಾರಾಮ, ಸಿಬ್ಬಂದಿಗಳಾದ ಸುನೀಲ ಪಾಂಡೆ,ಮಲ್ಲಿಕಾರ್ಜುನ ಧಾನಿಗೊಂಡ,ಮಂಜುನಾಥ ಯಕ್ಕಡಿ,ಬಸವರಾಜ ಹೆದ್ದೆರಿ, ರವಿ ಹೊಸಮನಿ,ರೇಣು ಸಿಕ್ಕಲಗೇರ್, ಮಾಬುಸಾಬ ಮುಲ್ಲಾ,ಮಂಜು ಕಮತದ ಅವರು ಭಾಗಿಯಾಗಿದ್ದರು.

Edited By : Nirmala Aralikatti
Kshetra Samachara

Kshetra Samachara

18/11/2020 07:11 pm

Cinque Terre

40.5 K

Cinque Terre

0

ಸಂಬಂಧಿತ ಸುದ್ದಿ