ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂಜಾಟ ಅಡ್ಡೆಯ ಮೇಲೆ ದಾಳಿ: 11 ಜನರ ಬಂಧನ

ಹುಬ್ಬಳ್ಳಿ: ಜೂಜಾಟದ ಅಡ್ಡೆಯ ಮೇಲೆ ಏಕ ಕಾಲಕ್ಕೆ ಎರಡು ಕಡೆ ದಾಳಿ ನಡೆಸಿದ ಕಮರಿಪೇಟೆ ಪೊಲೀಸರು 11 ಜನ ಜೂಜುಕೋರರನ್ನು ಬಂಧಿಸಿದ್ದಾರೆ.

ನಗರದ ಜಿ.ಅಡ್ಡಾದಲ್ಲಿ (ಗುರುಸಿದ್ಧೇಶ್ವರ ನಗರ) ಇಸ್ಪೀಟ್ ಆಡುತ್ತಿದ್ದ ಐವರನ್ನು ಕಮರಿಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 15,120 ರೂ. ನಗದು ಹಾಗೂ ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿ.ಅಡ್ಡಾದ ಸುರೇಂದ್ರ ರಾಮಚಂದ್ರಸಾ, ದೀಪಕ ಕಠಾರೆ, ಕಾರವಾರ ರಸ್ತೆಯ ಸುಶೀಲ ಅಲಿಯಾಸ್ ವಿಕ್ಕಿ, ತುಮಕೂರ ಓಣಿಯ ಪ್ರಭು ಪಾಟೀಲ ಹಾಗೂ ತೊರವಿಹಕ್ಕಲದ ರವಿ ಕಾಟೇಗರ ಬಂಧಿತರು.

ಮತ್ತೊಂದು ಪ್ರಕರಣ: ಮೂರುಸಾವಿರ ಮಠದ ಕಾಂಪೌಂಡ್ ಬಳಿ ಇಸ್ಪೀಟ್‌ ಆಡುತ್ತಿದ್ದ ಏಳು ಮಂದಿಯನ್ನು ಬಂಧಿಸಿರುವ ಕಮರಿಪೇಟೆ ಠಾಣೆ ಪೊಲೀಸರು, ಆರೋಪಿಗಳಿಂದ 12,350 ರೂ. ನಗದು ಜಪ್ತಿ ಮಾಡಿದ್ದಾರೆ. ತಿರುಪತಿ ಬಜಾರ್‌ನ ಪವನ್ ಲದ್ವಾ, ಜಿ.ಅಡ್ಡಾದ ಮಹಮ್ಮದಗೌಸ್ ಅರಳಿಕಟ್ಟಿ, ಗಣಪತಿ ಮೆಹರವಾಡೆ, ದತ್ತಾತ್ರೇಯ ಜಾಧವ ಹೆಗ್ಗೇರಿಯ ಪ್ರಶಾಂತ ಕಾಟಿಗರ, ತುಮಕೂರ ಓಣಿಯ ಕಿಶನ್ ಮಿಸ್ಕಿನ ಹಾಗೂ ಪ್ರಶಾಂತನಗರದ ಅಮೃತ ಜರತಾರಘರ ಬಂಧಿತರು. ಎರಡೂ ಕಡೆ ಇನ್ಸ್‌ಪೆಕ್ಟರ್ ಟಿ.ಬಿ. ಬುದ್ನಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

Edited By : Vijay Kumar
Kshetra Samachara

Kshetra Samachara

18/11/2020 10:45 am

Cinque Terre

46.8 K

Cinque Terre

0

ಸಂಬಂಧಿತ ಸುದ್ದಿ