ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾನಾಯಕ ಧಾರಾವಾಹಿ ಬ್ಯಾನರ್ ಹರಿದ ದುಷ್ಕರ್ಮಿಗಳು ಪ್ರಕರಣ ದಾಖಲು

ಅಣ್ಣಿಗೇರಿ : ತಾಲೂಕಿನ ಮಣಕವಾಡ ಗ್ರಾಮದ ಶ್ರೀ ಮೃತ್ಯುಂಜಯ ಮಠದ ಆವರಣದಲ್ಲಿ ಅಳವಡಿಸಿದ್ದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿಯ ಅಂಬೇಡ್ಕರ್ ಭಾವಚಿತ್ರವಿರುವ ಬ್ಯಾನರ್ ಯನ್ನು ಸತತ ಎರೆಡು ಬಾರಿ ಹರಿದು ಹಾಕಿದ ಕಾರಣ ದುಷ್ಕರ್ಮಿಗಳ ಪತ್ತೆಗಾಗಿ ಪ್ರಕರಣ ದಾಖಲಾಗಿದೆ.

ಮಣಕವಾಡ ಗ್ರಾಮದ ಶ್ರೀ ಮೃತ್ಯುಂಜಯ ಮಠದ ಆವರಣದಲ್ಲಿ ಅಳವಡಿಸಿದ್ದ ಮಹಾನಾಯಕ ಧಾರಾವಾಹಿ ಬ್ಯಾನರ್ ಅ.26 ರಂದು ಯಾರೋ ಹರಿದು ಹಾಕಿದ್ದಾರೆ, ಮರಳಿ ಸಾರ್ವಜನಿಕರು ಹೊಸ ಬ್ಯಾನರ್ ಅಳವಡಿಸಿದಾಗಲೂ ನ.7 ರಂದು ಮತ್ತೆ ಹರಿದು ಹಾಕಿದ್ದಾರೆ.

ಈ ಕುರಿತು ನೀಲಪ್ಪ ಚಾವಣೀಮನಿ ಎಂಬುವರು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಜಾತಿ ಜಾತಿಗಳ ಸಮುದಾಯಗಳಲ್ಲಿ ಒಡಕು ಹುಟ್ಟಿಸವರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆದಿದೆ.

Edited By : Nirmala Aralikatti
Kshetra Samachara

Kshetra Samachara

09/11/2020 04:32 pm

Cinque Terre

37.18 K

Cinque Terre

0

ಸಂಬಂಧಿತ ಸುದ್ದಿ