ಧಾರವಾಡ: ನಿನ್ನೆ ಬಂಧನಕ್ಕೊಳಗಾದ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ನಿವಾಸಕ್ಕೆ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿ ವಿನಯ್ ಅವರ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಿನಯ್ ಅವರ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿ ಹೊರ ಬಂದ ಸ್ವಾಮೀಜಿ, ವಿನಯ ಕುಲಕರ್ಣಿ ಅವರ ಬಂಧನದಿಂದ ಅವರ ಕುಟುಂಬಸ್ಥರು ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ವಿನಯ್ ಅವರು ನಮ್ಮ ಸಮಾಜದ ನಾಯಕರು. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದರು.
ನಿನ್ನೆ ಬಂಧನವಾಗಿರುವ ವಿನಯ ಕುಲಕರ್ಣಿ ಅವರನ್ನು ಜಿಲ್ಲಾ ನ್ಯಾಯಾಲಯ ಒಂದು ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಇಂದು ಸಂಜೆ ವೀಡಿಯೋ ಕಾನ್ಫರನ್ಸ್ ಮೂಲಕ ವಿಚಾರಣೆ ನಡೆಯಲಿದೆ.
Kshetra Samachara
06/11/2020 01:36 pm