ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:ಬೇಸಾಯ ತಂದ ಬೇಸರ, ಬೇಸತ್ತ ಯುವ ರೈತರ ಸರಣಿ ಆತ್ಮಹತ್ಯೆ !

ವರದಿ: ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

ಹುಬ್ಬಳ್ಳಿ: ಅಕಾಲಿಕ ಮಳೆಗೆ ನೆಲಕಚ್ಚಿದ ಬೆಳೆ, ಅಳಿದುಳಿದ ಅಲ್ಪಸ್ವಲ್ಪ ಬೆಳೆಗೆ ಸಿಗದ ಬೆಲೆ, ಸಾಲ ತೀರಿಸಲಾಗದೆ ಕಂಗೆಟ್ಟ ಅನ್ನದಾತರು ಮಾತ್ರ ಹಿಡಿದಿದ್ದು ಆತ್ಮಹತ್ಯೆಯ ದಾರಿ. ಹೌದು ಜಿಲ್ಲೆಯಲ್ಲಿ ಯುವ ರೈತರು ಕಂಗೆಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ರೈತರ ಜಂಘಾಬಲವೇ ಕುಗ್ಗಿ ಹೋಗಿದೆ.

ಧಾರವಾಡ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 14 ರೈತರು ಆತ್ಮಹತ್ಯೆಗೆ ಶರಣಾಗಿರೋದು ಜಿಲ್ಲೆಯ ರೈತರ ಆತಂಕಕ್ಕೆ ಕಾರಣವಾಗಿದೆ. ದುರಂತ ಅಂದರೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಬಹುತೇಕರು ಯುವ ರೈತರು ಅನ್ನೋದು ಆತಂಕಕಾರಿ ಸಂಗತಿ. ಕೋವಿಡ್ ಬಳಿಕ ಸಾಕಷ್ಟು ಯುವಕರು ಕೃಷಿಯತ್ತ ಮುಖ ಮಾಡಿದ್ದಾರೆ.‌ ಆದರೆ ಸಾಲ ತೀರಿಸಲಾಗದೆ ಬದುಕಿನ‌ ದಾರಿ ಕಾಣದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದು ಕಳವಳಕಾರಿ ಸಂಗತಿಯಾಗಿದೆ.

ಇಲ್ಲಿ ಮೆಣಸು, ಕಡಲೆ, ಹತ್ತಿ, ಗೋವಿನಜೋಳ ಬೆಳೆಗಳು ಹಾಳಾಗಿತ್ತು. ಅದರಲ್ಲೂ ಸಣ್ಣ ಹಿಡುವಳಿದಾರರು ಸಾಲದ ಸುಳಿಗೆ ಸಿಲುಕಿ‌ ಪರದಾಡುವಂತಾಗಿದೆ. ಅಕಾಲಿಕ ಮಳೆಯಿಂದಾಗಿ 1,17,389 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ, 14,67,880 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. 49,601 ಹೆಕ್ಟೇರ್ ಹತ್ತಿ, 16,251 ಹೆಕ್ಟೇರ್ ಜೋಳ, 9,347 ಹೆಕ್ಟೇರ್ ಭತ್ತ, 11,960 ಹೆಕ್ಟೇರ್ ಮೆಣಸಿನಕಾಯಿ, 2,300 ಹೆಕ್ಟೇರ್ ಈರುಳ್ಳಿ ಬೆಳೆ ನಾಶವಾಗಿದೆ. ಇದರಿಂದ ಕಂಗಾಲಾದ ರೈತರು, ಜಿಲ್ಲೆಯ ಧಾರವಾಡ 3, ಹುಬ್ಬಳ್ಳಿ 1, ಕುಂದಗೋಳ 1, ನವಲಗುಂದ 6, ಅಣ್ಣಿಗೇರಿ ತಾಲೂಕಿನಲ್ಲಿ 3 ಸೇರಿದಂತೆ ಇದುವರೆಗೆ 14 ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಬೆಳೆಹಾನಿಗೆ ತಕ್ಷಣ ಸರಕಾರ ಪರಿಹಾರ ಒದಗಿಸೋದು, ಸರಿಯಾದ ಸಮಯಕ್ಕೆ ಬೆಂಬಲ ಬೆಲೆ ಘೋಷಣೆ ಮಾಡೋದು ಸೇರಿದಂತೆ ಹಲವು ರೈತಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರನ್ನು ಸರಕಾರ ಬದುಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

Edited By : Manjunath H D
Kshetra Samachara

Kshetra Samachara

09/03/2022 04:32 pm

Cinque Terre

40.69 K

Cinque Terre

4

ಸಂಬಂಧಿತ ಸುದ್ದಿ