ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ : ಭೂಮಿ ಕಳೆದುಕೊಂಡ ರೈತರ ಗೋಳು ಕೇಳುವವರಾರು..

ಅಳ್ನಾವರ : ಭೂ ಕಬಳಿಕೆ ವಿಷಯದಲ್ಲಿ ರೈತರಿಗೆ ಅನ್ಯಾಯವಾಗಿದ್ದು,ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು ಅಳ್ನಾವರ ತಾಲೂಕಿನ ಅಂಬೋಳ್ಳಿ ಗ್ರಾಮದ ಆರು ಜನ ರೈತರಿಗೆ ಅನ್ಯಾಯವಾಗಿದೆ.

2018-2019 ರ ವರೆಗೂ ಎಲ್ಲವೂ ಸರಿಯಾಗಿಯೇ ಇತ್ತು.ತದನಂತರ ಉತಾರ ದಲ್ಲಿ ಆರು ಜನ ರೈತರ ಒಟ್ಟು ಮೂವತ್ತು ಗುಂಟೆ ಜಮೀನು ಮಾಯವಾಗಿದೆ.

ವಿಪರ್ಯಾಸ ಎಂದರೆ ಬಹು ವರ್ಷದಿಂದ ಈ ಜಮೀನು ಇದೇ ರೈತರ ಹೆಸರಿನಲ್ಲಿದೆ.

ಇನ್ನು ಜಮೀನು ಕಳೆದುಕೊಂಡ ರೈತರೆಲ್ಲರು ಗಾಬರಿಯಿಂದ ಅಳ್ನಾವರ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ್ದಾರೆ. ಆದರೆ ಈ ರೈತರಿಗೆ ಸೂಕ್ತ ಉತ್ತರ ದೊರಕಿಲ್ಲ.ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸಹ ಸರಿಯಾದ ಮಾಹಿತಿ ನೀಡದೆ ಸತಾಯಿಸಿದ್ದಾರೆ.

ಕಳೆದ ಮೂರು ವರ್ಷದಿಂದ ಅಳ್ನಾವರ,ಧಾರವಾಡದ ಕಚೇರಿಗಳಿಗೆ ಅಲೆದಾಟ ನಡೆಸುತ್ತಿರು ಈ ಅನ್ನದಾತರ ಸಂಕಷ್ಟಕ್ಕೆ ಕೊನೆಯೇ ಇಲ್ಲವಾಗಿದೆ.ಇನ್ನಾದರೂ ಅನ್ಯಾಯವಾದ ಈ ಎಲ್ಲ ರೈತರಿಗೆ ಭೂಮಿ ಹಿಂತಿರುಗಿಸಬೇಕು,ಕನಿಷ್ಠ ಪಕ್ಷ ನಷ್ಟ ತುಂಬಿಸಲು ಪರಿಹಾರವಾದರು ನೀಡಬೇಕು ಎನ್ನುವುದು ರೈತರ ಅಳಲಾಗಿದೆ.

-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ

Edited By : Shivu K
Kshetra Samachara

Kshetra Samachara

16/02/2022 08:42 pm

Cinque Terre

94.63 K

Cinque Terre

2

ಸಂಬಂಧಿತ ಸುದ್ದಿ