ಕಲಘಟಗಿ:ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಗೋವಿನ ಜೋಳದ ವ್ಯಾಪಾರಸ್ಥ ರೈತರ ಗೋವಿನಜೋಳ ಖರೀದಿ ಮಾಡಿ ತೂಕದಲ್ಲಿ ಮೋಸ ಮಾಡ್ತಿದ್ದ. ಈ ವೇಳೆ ವ್ಯಾಪಾರಸ್ಥನನ್ನು ರೆಡ್ ಹ್ಯಾಂಡಾಗಿ ಹಿಡಿದ ಗ್ರಾಮದ ರೈತರು ಆತನನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರತಿ ಕ್ವಿಂಟಲ್ ತೂಕಕ್ಕೆ ರಿಮೋಟ್ ಕಂಟ್ರೋಲ್ ಮೂಲಕ ಎಂಟು ಕೆಜಿ ಮೋಸ ಮಾಡುತ್ತಿರುವುದು ರೈತರ ಗಮನಕ್ಕೆ ಬಂದಿದೆ.
ಇದನ್ನು ಪ್ರಶ್ನೆ ಮಾಡಿದ ರೈತರು ಗೋವಿನ ಜೋಳದ ವ್ಯಾಪಾರಸ್ಥನನ್ನು ತರಟೆಗೆ ತೆಗೆದುಕೊಂಡು ಅದರ ವಿಡಿಯೋ ಕೂಡ ಮಾಡಿದ್ದಾರೆ.
Kshetra Samachara
24/01/2021 12:34 pm