ಹುಬ್ಬಳ್ಳಿ: ಅದು ಭೀಕರ ರಸ್ತೆ ಅಪಘಾತ. ಆ ಅಪಘಾತದಲ್ಲಿ ಯುವಕನೊಬ್ಬ ಜೀವ ಕಳೆದುಕೊಂಡಿದ್ದಾನೆ. ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಿದ್ದ ಪೊಲೀಸರು ಪ್ರಕರಣ ಮುಚ್ಚಿಹಾಕಲು ಮುಂದಾಗಿದ್ದಾರೆ ಎಂಬುವಂತ ಅನುಮಾನ ಹುಟ್ಟಿಕೊಂಡಿದೆ. ಅಷ್ಟಕ್ಕೂ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಯಾಕಿಷ್ಟು ನಿರ್ಲಕ್ಷ್ಯ ವಹಿಸಿದೆ ಎಂಬುವಂತ ಸ್ಪೋಟಕ ಮಾಹಿತಿ ಇಲ್ಲಿದೆ ನೋಡಿ..
ಕಳೆದ ರವಿವಾರ ಬೆಳಗಿನ ಜಾವ ನಡೆದ ಭೀಕರ ಅಪಘಾತದಲ್ಲಿ ಕಾರು,ಬೈಕ್ ನಡುವೆ ಅಪಘಾತ ನಡೆದಿದ್ದು, ಈ ದುರಂತದಲ್ಲಿ 27 ವರ್ಷದ ಗಣೇಶ ಎಂಬುವ ಯುವಕ ಸಾವನ್ನಪ್ಪಿದ್ದಾನೆ. ಆದರೆ ಎಫ್ ಐ ಆರ್ ದಾಖಲಾಗಿದ್ದರೂ ಕೂಡ ಪೊಲೀಸರು ಅಪಘಾತ ಮಾಡಿದ ಉದ್ಯಮಿಯೊಬ್ಬರ ಮಗನ ಬಗ್ಗೆ ಹಾಗೂ ಕಾರ್ ಚಾಲನೆ ಮಾಡಿದವರ ಬಗ್ಗೆ ಯಾವುದೇ ಮಾಹಿತಿ ಹಾಕದೇ ಇರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಾರು ಅಪಘಾತದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಕಷ್ಟು ಸಾಕ್ಷಿಗಳು ಲಭ್ಯವಾಗಿದ್ದರೂ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಮಾತ್ರ ತಲೆ ಕೆಡೆಸಿಕೊಂಡಿಲ್ಲ.
ಇನ್ನೂ ಹುಬ್ಬಳ್ಳಿಯ ಉಣಕಲ್ ಸಮೀಪ ಸಿದ್ದೇಶ್ವರ ಸರ್ಕಲ್ ನಲ್ಲಿ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ನಡೆದ ಹಿಟ್ ಆ್ಯಂಡ್ ರನ್ ಕೇಸ್ ನಲ್ಲಿ ಸ್ಥಳದಲ್ಲಿಯೇ ವಿದ್ಯಾನಗರದ ಬನಶಂಕರಿ ಬಡಾವಣೆ ನಿವಾಸಿ ಗಣೇಶ ಸಾವನ್ನಪ್ಪಿದ್ದಾನೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ್ರೂ ದೂರಿನಲ್ಲಿ ಡ್ರೈವರ್ ಎಂದು ಉಲ್ಲೇಖಿಸಿಲಾಗಿದೆ.
ಪ್ರಮುಖ ಆರೋಪಿ ಕಾರ್ ಡ್ರೈವರ್ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಕಾರು ಚಾಲಕ ಯಾರೂ ಅನ್ನೋದೆ ಗೊತ್ತಿಲ್ವಾ ಪೊಲೀಸರಿಗೆ..? ಎಂಬುವಂತ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಪಘಾತದ ನಂತರ ಪ್ರತಿಷ್ಠಿತ ಉದ್ಯಮಿಯ ಮಗ ಕಾರು ಬದಲಾಯಿಸೋ ದೃಶ್ಯವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ನಂತರ ತನ್ನ ಕಾರು ಬಿಟ್ಟು ಮತ್ತೊಂದು ಕಾರ್ ಹತ್ತಿ ಪರಾರಿಯಾಗಿದ್ದಾನೆ. ಅಮಾಯಕನ ಜೀವ ತೆಗೆದ ಹುಬ್ಬಳ್ಳಿಯ ಪ್ರತಿಷ್ಠಿತ ಉದ್ಯಮಿ ಮಗನ ಪ್ರಕರಣ ಮುಚ್ಚಿ ಹಾಕಲು ಪೊಲೀಸರ ಸಾಥ್ ನೀಡಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯೇ ಉತ್ತರ ನೀಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/09/2022 04:02 pm