ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೆಂಕಿ ಅವಘಡ ಮೂರು ದನಗಳು ಸುಟ್ಟು ಕರಕಲು

ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಸಂಕಲೀಪುರ ಎಂಬುವವರಿಗೆ ಸೇರಿದ ದನ ಕಟ್ಟುವ ಶೆಡ್‌ಗೆ ಬೆಂಕಿ ತಗುಲಿ ಎರಡು ಎತ್ತುಗಳು ಹಾಗೂ ಒಂದು ಆಕಳು ಸೇರಿ ಮೂರು ದನಗಳು ಸುಟ್ಟು ಕರಕಲು ಆಗಿರುವ ಘಟನೆ ಸಂಭವಿಸಿದೆ.

ಬೆಂಕಿ ಹೇಗೆ ತಗುಲಿತು ಎಂಬುದರ ಕುರಿತು ಮಾಹಿತಿ ದೊರೆತಿಲ್ಲ. ವಿಷಯ ತಿಳಿದ ತಕ್ಷಣ ಗ್ರಾಮದ ಜನರು ಶೆಡ್ ಬಳಿ ತೆರಳಿ ಬೆಂಕಿ ನಂದಿಸಿದ್ದಾರೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ದೌಡಾಯಿಸಿದ ಧಾರವಾಡ ಗ್ರಾಮೀಣ ಪೊಲೀಸರು, ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.

Edited By : Vijay Kumar
Kshetra Samachara

Kshetra Samachara

19/08/2022 12:43 pm

Cinque Terre

36.64 K

Cinque Terre

3

ಸಂಬಂಧಿತ ಸುದ್ದಿ