ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದ ನಾಲ್ಕು ಕಡೆಗಳಲ್ಲಿ ಅಪಘಾತ: ಐವರು ಸಾವು

ಧಾರವಾಡ: ಧಾರವಾಡದ ನಾಲ್ಕು ಪ್ರದೇಶಗಳಲ್ಲಿ ನಡೆದ ನಾಲ್ಕು ಪ್ರತ್ಯೇಕ ಅಪಘಾತಗಳಲ್ಲಿ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಧಾರವಾಡ ತಾಲೂಕಿನ ತೇಗೂರು ಕ್ರಾಸ್ ಬಳಿ ನಡೆದ ಲಾರಿ-ಬೈಕ್ ಡಿಕ್ಕಿಯಲ್ಲಿ ಮಾರ್ಕೊಪೊಲೊ ಕಂಪೆನಿಯ ಸೆಕ್ಯುರಿಟಿ ಗಾರ್ಡ್‌ಗಳಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಸಿದ್ದಪ್ಪ ಕಲ್ಲೇದ ಹಾಗೂ ಕಲ್ಲಪ್ಪ ಎನ್ನುವವರು ಸಾವಿಗೀಡಾಗಿದ್ದಾರೆ.

ಧಾರವಾಡದ ಅಮ್ಮಿನಬಾವಿಯ ರಸ್ತೆಯಲ್ಲಿ ಬೈಕ್ ಸ್ಕಿಡ್‌ ಆದ ಪರಿಣಾಮ ಕಬ್ಬೇನೂರಿನ 26 ವರ್ಷದ ರಾಜು ಕುಲಕರ್ಣಿ ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ.

ಧಾರವಾಡದ ಉಪನಗರ ಪೊಲೀಸ್ ಠಾಣೆಯ ಸಮೀಪದಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಸೈದಾಪೂರದ ಮಜೀನ್ ಅಮ್ಮಜ್ಜನವರ ಹಾಗೂ ಜನ್ನತನಗರದ ಫರ್ಹಾನ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ.

ಬೆಳಗಿನ ಜಾವ ಯರಿಕೊಪ್ಪದ ಬಳಿ ವಿಜಯಪುರದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸೇರಿದಂತೆ ಕುಟುಂಬದ ಐವರಿದ್ದ ಕಾರು ಪಲ್ಟಿಯಾಗಿದ್ದು, ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ನಾಲ್ಕೂ ಘಟನೆಗಳ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ.

Edited By : Vijay Kumar
Kshetra Samachara

Kshetra Samachara

19/04/2022 08:11 pm

Cinque Terre

59.13 K

Cinque Terre

5

ಸಂಬಂಧಿತ ಸುದ್ದಿ