ಹುಬ್ಬಳ್ಳಿ: ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಬೈಕ್ ಸವಾರನೋರ್ವ ಬಲಿಯಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿ ಕ್ರಾಸ್ ಹತ್ತಿರ ನಡೆದಿದೆ.
ಅದರಗುಂಚಿ ನಿವಾಸಿ ಕಾಸೀಮ್ಸಾಬ್ ನದಾಫ್ (39) ಮೃತ ಸವಾರ. ಲಾರಿ ಚಾಲಕ ರಾಮಪ್ಪ ಬಾರಕಿ ಎಂಬಾತ ಹಾವೇರಿಯಿಂದ ಹುಬ್ಬಳ್ಳಿ ಕಡೆಗೆ ಅತಿ ವೇಗವಾಗಿ ಹೊರಟಿದ್ದ. ಈ ವೇಳೆ ಕಾಸೀಮ್ಸಾಬ್ ನದಾಫ್ ಬೈಕ್ ತೆಗೆದುಕೊಂಡು ಬೆಳಗಲಿ ಕಡೆಯಿಂದ ನೂಲ್ವಿ ಕ್ರಾಸ್ ದಾಟುತ್ತಿದ್ದಾಗ ವೇಗವಾಗಿ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಕಾಸೀಮ್ಸಾಬ್ ನದಾಫ್ ಸ್ಥಳದಲ್ಲಿ ಮೃತರಾಗಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/02/2022 09:05 am