ಹುಬ್ಬಳ್ಳಿ: ಟಾಟಾ ಏಸ್ ಮತ್ತು ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರನ ಸ್ಥಿತಿ ಗಂಭೀರವಾದ ಘಟನೆ ಹುಬ್ಬಳ್ಳಿ ಸಮೀಪದ ಗಂಜಿಗಟ್ಟಿ ಕ್ರಾಸ್ ಬಳಿ ನಡೆದಿದೆ.
ಟಾಟಾಎಸ್ ದಲ್ಲಿ ಜನರನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಚಾಲಕ, ವೇಗವಾಗಿ ಬಂದ ಸ್ಕೂಟಿ ಚಾಲಕ ಟಾಟಾಎಸ್ ಗೆ ಡಿಕ್ಕಿ ಹೊಡೆದಿದ್ದು, ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ, ಕಿಮ್ಸ್ ಗೆ ಸ್ಥಳೀಯರು ರವಾನಿಸಿದ್ದಾರೆ. ಈ ಕುರಿತು ಮಿಶ್ರಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/10/2020 10:48 am