ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈಜಲು ಹೋಗಿ ನೀರು ಪಾಲಾದ ಬಾಲಕರು

ಧಾರವಾಡ: ಕೆರೆಯಲ್ಲಿ ಈಜಲು ಹೋಗಿ ಬಾಲಕರಿಬ್ಬರು ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಇಂದು ನಡೆದಿದೆ.

ಆದಿನಾಥ್ ಸಂಗೊಳ್ಳಿ (13) ಹಾಗೂ ಸುಭಾಷ ಸಂಗೊಳ್ಳಿ (13) ಮೃತ ಬಾಲಕರು. ಮುಮ್ಮಿಗಟ್ಟಿ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಈ ಬಾಲಕರು ಈಜು ಬರದೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಇಬ್ಬರೂ ಬಾಲಕರನ್ನೂ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರಾದರೂ ಮಾರ್ಗ ಮಧ್ಯೆಯೇ ಬಾಲಕರು ಮೃತಪಪಟ್ಟಿದ್ದಾರೆಂದು ಗರಗ ಠಾಣೆ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗರಗ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

02/11/2020 09:18 pm

Cinque Terre

37.77 K

Cinque Terre

0

ಸಂಬಂಧಿತ ಸುದ್ದಿ