ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೆಂಡತಿ ಜೊತೆ ಜಗಳವಾಡಿ ನೇಣಿಗೆ ಶರಣಾದ ಗಂಡ

ಧಾರವಾಡ: ಹೆಂಡತಿಯೊಂದಿಗೆ ಜಗಳವಾಡಿ ಮನನೊಂದ ಗಂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಮದಿಹಾಳ ಕೊಟ್ಟಣದ ಓಣಿಯಲ್ಲಿ ನಡೆದಿದೆ.

ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ಮಹಾಂತೇಶ ಹುರಕಡ್ಲಿ (32) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನು.

ಹೆಂಡತಿ ಮನೆಗೆ ಬಂದಿದ್ದ ಈತ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ. ಇದರಿಂದ ಮನನೊಂದು ನೇಣು ಹಾಕಿಕೊಂಡಿದ್ದ. ಇದು ಗೊತ್ತಾದ ತಕ್ಷಣ ಹೆಂಡತಿ ಮನೆಯವರು ಕೂಡಲೇ ಆತನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಈ ಕುರಿತು ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

30/10/2020 05:59 pm

Cinque Terre

71.43 K

Cinque Terre

13

ಸಂಬಂಧಿತ ಸುದ್ದಿ