ಹುಬ್ಬಳ್ಳಿ: ಅಂತರ ಜಿಲ್ಲಾ ಬೈಕ್ ಕಳ್ಳ ಹಾಗೂ ಅಂಗಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನ್ನನ್ನು ಹಿಡಿಯುವಲ್ಲಿ ಉಪನಗರ ಪೋಲಿಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ಬಳಿ ಕಳ್ಳ ಟೋಪಗಿ ವಿಜಯನನ್ನು ಬಂಧಿಸಿ ಉಪನಗರ ಪೊಲೀಸ್ ಠಾಣೆಯ ಎರಡು ಪ್ರಕರಣ ಧಾರವಾಡದ ವಿದ್ಯಾಗಿರಿ, ಹಳೇಹುಬ್ಬಳ್ಳಿಯ ಹಾಗೂ ಲೋಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿದ್ದಾರೆ.
ಇನ್ನೂ ಬಂಧಿತ ಕಳ್ಳ ಟೋಪಗಿ ವಿಜಯ ಬಳಿಯಿದ್ದ ವಿವಿಧ ಕಂಪನಿಯ ಐದು ಬೈಕ್ ಹಾಗೂ ನಗದು ಹಣ ಸೇರಿಸಿ ಒಟ್ಟು 2,35200 ರೂಪಾಯಿ ಮೌಲ್ಯದ ಬೈಕ್ ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Kshetra Samachara
27/10/2020 10:18 am