ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಬೈಲ್ ಕಳ್ಳರೆಂದು ಬಂಧಿಸಿದಾಗ ಬಯಲಾಯ್ತು ನಿಜವಾದ ಸತ್ಯ..!

ಧಾರವಾಡ: ಧಾರವಾಡದ ಅಕ್ಕಿಪೇಟೆಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಧಾರವಾಡ ಹೊಸಯಲ್ಲಾಪುರದ ವಿನೋದ್ ಕಿರ್ಗಿ, ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಮುಲ್ಲಾ ಓಣಿಯ ನಿಂಗಪ್ಪ ಶೀಲವಂತರ ಹಾಗೂ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಮೀನಾಕ್ಷಿ ಮುತ್ತು ಮಂಟೂರ ಎಂಬ ಮೂವರನ್ನು ಶಹರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಮೂವರೂ ಆರೋಪಿಗಳು ಮೊಬೈಲ್ ಕಳ್ಳತನದ ಜೊತೆಗೆ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಹೋಗಿದ್ದ ಪ್ರಕರಣ ಕೂಡ ಬೆಳಕಿಗೆ ಬಂದಿದೆ.

ಧಾರವಾಡದ ಅಕ್ಕಿಪೇಟೆಯಲ್ಲಿ ಅಮ್ಮಿನಭಾವಿ ಗ್ರಾಮದ ಕೃಷ್ಣಾ ಜಾಧವ ಅವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಈ ಮೂವರೂ ಬೆಲೆ ಬಾಳುವ ಮೊಬೈಲ್ ಕದ್ದು ಪರಾರಿಯಾಗಿದ್ದರು.

ಸದ್ಯ ಇವರಿಂದ 79,240 ಮೊತ್ತದ ನಾಲ್ಕು ವಿವಿಧ ಕಂಪೆನಿಯ ಮೊಬೈಲ್ ಹಾಗೂ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 2,20,500 ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

21/10/2020 09:38 am

Cinque Terre

29.2 K

Cinque Terre

1

ಸಂಬಂಧಿತ ಸುದ್ದಿ