ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಛೋಟಾ ಮುಂಬೈನಲ್ಲಿ ಹುಬ್ಬಳ್ಳಿಯಲ್ಲಿ ಹೆಚ್ಚಿದ‌ ಬೈಕ್ ಕಳ್ಳತನ..!

ಹುಬ್ಬಳ್ಳಿ: ಕಿಲ್ಲರ್ ಕೊರೋನಾ ಇಡೀ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿ ಮಾಡಿದೆ. ಕೋರೋನಾ ಏಪೆಕ್ಟ್ ನಿಂದ‌ ನೂರಾರು ಉದ್ಯಮಗಳು ಕಾರ್ಖಾನೆಗಳು ಸ್ಥಗಿತಗೊಂಡಿವೆ‌. ಸಾವಿರಾರು ಜನರು‌ ಉದ್ಯೋಗ ಕಳೆದುಕೊಂಡು ಕಿಲ್ಲರ್ ಕೊರೋನಾಗೆ ಶಾಪ ಹಾಕ್ತಿದ್ದಾರೆ. ಜೊತೆಗೆ ಲಾಕ್ ಡೌನ್ ನಂತರ ನಿರುದ್ಯೋಗ ಸಮಸ್ಯೆ ಹೆಚ್ಚಾದ ಪರಿಣಾಮ ಅಪರಾಧ ಕೃತ್ಯಗಳು ಸಹ ಹೆಚ್ಚಿವೆ. ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ನಂತರ ಬೈಕ್ ಕಳ್ಳತನ ಹೆಚ್ಚಳವಾಗಿದ್ದು, ಬೈಕ್ ಮಾಲೀಕರ‌ ನಿದ್ದೆಗೆಡುವಂತೆ ಮಾಡಿದೆ..

ಒಂದಕ್ಕಿಂತ ಒಂದು ಹೊಸತು.. ಒಂದಕ್ಕಿಂತ ಮತ್ತೊಂದು ಚೆಂದವಾದ ಬೈಕ್.. ಆದರೆ ಇಂತಹ ಬೆಲೆಬಾಳುವ ಬೈಕ್ ಗಳು ನಿಮ್ಮಲ್ಲಿ ಇದ್ದರೆ ಹುಷಾರ್. ಯಾಕಂದ್ರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂತಹ ಬೈಕ್ ಗಳನ್ನು ಎಲ್ಲಿ‌ ನಿಲ್ಲಿಸಿದರು ಕಳ್ಳರು ತಮ್ಮ ಕೈಚಳಕ ತೋರಿಸಿ ಎಸ್ಕೇಪ್ ಮಾಡ್ತಾ ಇದಾರೆ. ಬೈಕ್‌ ಮಾಲೀಕರು ಲಕ್ಷಾಂತರ ರೂಪಾಯಿ ಹಣ ಕೊಟ್ಟು ಸಾಲ‌ ಸೋಲ ಮಾಡಿ ಬೈಕ್ ಖರೀದಿಸಿದರೆ ಬೈಕ್ ಚೋರರು ನಿಂತ ಜಾಗದಿಂದಲೇ ಬೈಕ್ ಗಳನ್ನು ಎತ್ತಿಕೊಂಡು ಹೋಗ್ತಾ ಇದಾರೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿರುವುದು ವಾಹನ‌ ಮಾಲೀಕರ ನಿದ್ದೆಯನ್ನೆ ಕೆಡಿಸಿದಂತೆ ಮಾಡಿದೆ. ಮಾರುಕಟ್ಟೆ ಇರಲಿ. ಮನೆ ಮುಂದೆ ಇರಲಿ. ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿರಲಿ ಕ್ಷಣ ಮಾತ್ರದಲ್ಲಿ ಬೈಕ್ ಕಳ್ಳರು ಬೈಕ್ ಗಳನ್ನು ಕಳ್ಳತನ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ‌ ಕಾರಣವಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೈಕ್ ಕಳ್ಳರ ಜಾಲವೊಂದು ಹಲವಾರು ವರ್ಷಗಳಿಂದ ಸಕ್ರೀಯವಾಗಿದೆ. ಅಲ್ಲದೇ ಕದ್ದ ಬೈಕ್ ಗಳ ಸಾಮಾಗ್ರಿಗಳನ್ನ ಕೆಲಕ್ಷಣಗಳಲ್ಲೆ ಬಿಡಿ ಭಾಗಗಳನ್ನಾಗಿ ಮಾಡಿ ಮಾರಾಟ ಮಾಡುವೆ ಜಾಲವೂ ಸಹ ಹುಬ್ಬಳ್ಳಿಯಲ್ಲಿದೆ. ಹೀಗಾಗಿ ಬೈಕ್ ಕಳ್ಳತನದ ನಂತರ ಮಾಲೀಕರಿಗೆ ವಾಹನಗಳು ಮರಳಿ ಸಿಕ್ಕ ಉದಾಹರಣೆಗಳು ಇಲ್ಲದಾಗಿದೆ. ಪ್ರತಿನಿತ್ಯ ಹತ್ತಾರು ವಾಹನಗಳು ಕಳ್ಳತನವಾಗುತ್ತಿದ್ರು ಪೊಲೀಸರು ಮಾತ್ರ ಬೈಕ್ ಕಳ್ಳರ ಹೆಡೆಮುರಿ ಕಟ್ಟದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇನಾದರೂ ಹುಬ್ಬಳ್ಳಿ ಪೊಲೀಸರು ಬೈಕ್ ಕಳ್ಳರ ಕೈಗಳಿಗೆ ಬೇಡಿ ಹಾಕಿ ಬಿಸಿಮುಟ್ಟಿಸಲಿ ಅನ್ನೋದು ಸಾರ್ವಜನಿಕರ ಒತ್ತಾಯವಾಗಿದೆ.

Edited By :
Kshetra Samachara

Kshetra Samachara

20/10/2020 07:35 pm

Cinque Terre

39.33 K

Cinque Terre

6

ಸಂಬಂಧಿತ ಸುದ್ದಿ