ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾಣಿಜ್ಯನಗರಿಯಲ್ಲಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ: ಮಹಿಳೆಯ ಬಂಧನ

ಹುಬ್ಬಳ್ಳಿ: ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಹಿತಿ ಕಲೆ ಹಾಕಿದ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ.

ಚಾಂದಬಿ ಅಮೀನ್ ಶೇಖ್ ಬಂಧಿತ ಮಹಿಳೆ. ಸಿದ್ಧೇಶ್ವರ ಪಾರ್ಕ್‌ನ ಲಕ್ಕೀಸ್ ಯುನಿಸೆಕ್ಸ್ ಸಲೂನ್‌ನಲ್ಲಿ ಮಸಾಜ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಚಾಂದಬಿ ಸಲೂನ್‌ನಲ್ಲಿ ಇಬ್ಬರು ಹೆಣ್ಣುಮಕ್ಕಳನ್ನು ಮಸಾಜ್‌ ಕೆಲಸಕ್ಕೆ ಇಟ್ಟುಕೊಂಡು ಪುರುಷ ಗ್ರಾಹಕರೊಂದಿಗೆ ಹಣದ ವ್ಯವಹಾರ ನಡೆಸುತ್ತಿದ್ದಳು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಸಿಕ್ಕಿ ಬಿದ್ದಿದ್ದಾಳೆ.

ಮಹಿಳೆಯ ದಂಧೆಯ ವಿರುದ್ಧ ಧಾರವಾಡದ ಅಸ್ಮಾ ಇನಾಮದಾರ್ ಮತ್ತು ಹುಬ್ಬಳ್ಳಿಯ ರೇಷ್ಮಾ ಹುಲ್ಲೂರು ದೂರು ನೀಡಿದ್ದರು. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

13/10/2020 10:06 am

Cinque Terre

38.72 K

Cinque Terre

1

ಸಂಬಂಧಿತ ಸುದ್ದಿ