ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚಂದವನದಲ್ಲಿ ಮಿಂಚುತ್ತಿದ್ದಾರೆ ವಾಣಿಜ್ಯ ನಗರಿಯ ಕ್ಯೂಟ್ ಸಿಸ್ಟರ್ಸ್

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ- ಗಾಡ್ ಫಾದರ್ ಇದ್ರೆ ಮಾತ್ರ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಲು ಸಾಧ್ಯ. ಆದರೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ, ಇಲ್ಲೊಂದು ಕುಟುಂಬದಲ್ಲಿ ಈ ಸಹೋದರಿಯರು ನಮ್ಮ ಚಂದನವನದಲ್ಲಿ ತಮ್ಮದೆಯಾದ ಛಾಪು ಮೂಡಿಸುತ್ತಿದ್ದಾರೆ. ಅಷ್ಟಕ್ಕೂ ಆ ಕ್ಯೂಟ್ ಸಿಸ್ಟರ್ಸ್ ಯಾರು ಅಂತಿರಾ ಹಾಗಿದ್ದರೆ ಈ ಸ್ಟೋರಿ ನೋಡಿ.....

ನಟನೆ ಮತ್ತು ನೃತ್ಯದಲ್ಲಿ ತೊಡಗಿಸಿಕೊಂಡ ಈ ಇಬ್ಬರು ಸಹೋದರಿಯರು ಅಕ್ಷತಾ ಮತ್ತು ಅನಿತಾ ಅಂತ. ಹುಬ್ಬಳ್ಳಿಯ ಯಲ್ಲಪ್ಪ ಲದ್ವಾ ಅವರ ಸುಪುತ್ರಿಯರು. ಈ ಜೋಡಿ ಇದೀಗ ಚಂದನವನದಲ್ಲಿ ಸಕತ್ ಬ್ಯೂಸಿ ಆಗಿದ್ದಾರೆ. ಹಿರಿಯ ಮಗಳಾದ ಅಕ್ಷತಾ ಅವರು ಗಿನಿರಾಮ ಸೇರಿದಂತೆ ಕಿರುತೆರೆ ಅಷ್ಟೇ ಅಲ್ಲದೆ, ಮನೆ ತುಂಬಾ ಬರೀ ಜಂಭ, ಗೊಂದಲಪುರ, ತಾಯಿಗೆ ತಕ್ಕ ಮಗ, ಚಂದ್ರಕಲಾ, ಜೊಲ ಪಾರ್ಟಿ ಸೇರಿದಂತೆ ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ತೆಲುಗಿನ ಕ್ಲಿಕ್ ಎಂಬ ಚಿತ್ರದಿಂದ ತೆಲಗು ಇಂಡಸ್ಟ್ರಿಯಲ್ಲಗೂ ಕೂಡಾ ಕಾಲಿಡುತ್ತಿದ್ದಾರೆ.

ತಂದೆಯ ನಟ ಶೈಲಿಯನ್ನು ನೋಡುತ್ತಾ ಬೆಳೆದ ಮಕ್ಕಳಿಗೆ ವಿದ್ಯೆಗಿಂತ ಜಾಸ್ತಿ ನಟನೆಯೇ ಪ್ರಥಮ ಆದ್ಯತೆ ಆಗಿದೆ...

ಈ ಸಹೋದರಿಯರು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಚಿಕ್ಕ ವಯಸ್ಸಿನಿಂದ ಆಶೆಯನ್ನು ಹೊತ್ತಿಕೊಂಡು ಬಂದ ಇವರಿಗೆ, ಕನಸು ಇಡೇರುವ ಸಮಯ ಬಂದಿದೆ. ಈ ಇಬ್ಬರು ಬೆಡಗಿಯರು ತಮ್ಮ ಗುರಿ ಸಾಧನೆಗಾಗಿ ಹಗಲಿರುಳು ಶ್ರಮಪಡುತ್ತಿರುವುದು ಎಲ್ಲರಿಗೂ ಮಾದರಿಯೇ ಸರಿ. ಈ ಮಕ್ಕಳ ಬೆಳವಣಿಗೆಯನ್ನು ನೋಡಿ ಪಾಲಕರಲ್ಲಿ ಮಂದಹಾಸ ಮೂಡಿದೆ....

ಒಟ್ಟಿನಲ್ಲಿ ನಮ್ಮ ಹುಬ್ಬಳ್ಳಿಯ ಈ ಬೆಡಗಿಯರು ಫಿಲ್ಮ್ ಇಂಡಸ್ಟ್ರಿಯಲ್ ದಲ್ಲಿ ಬೆಳೆದು, ಇನ್ನಷ್ಟು ಹೊಸ ಹೊಸ ಚಿತ್ರಗಳಲ್ಲಿ ನಟನೆ ಮಾಡಿಲಿ ಎನ್ನುವುದೆ ನಮ್ಮ ಉತ್ತರ ಕರ್ನಾಟಕದ ಜನತೆಯ ಆಶಯವಾಗಿದೆ......!

Edited By : Nagesh Gaonkar
Kshetra Samachara

Kshetra Samachara

25/02/2021 05:24 pm

Cinque Terre

79.15 K

Cinque Terre

8

ಸಂಬಂಧಿತ ಸುದ್ದಿ