ಧಾರವಾಡ: ಇದೇ ತಿಂಗಳು 31ರಂದು ವಿಘ್ನೇಶ್ವರ ದೇಶದಾದ್ಯಂತ ಎಲ್ಲರ ಮನೆ, ಮನಗಳಿಗೆ ಬರಲು ಸಿದ್ಧಗೊಂಡಿದ್ದಾನೆ. ಪ್ರಸಕ್ತ ವರ್ಷ ಮಾರುಕಟ್ಟೆಯಲ್ಲಿ ಗಮನಸೆಳೆಯುತ್ತಿರುವುದು ಅಪ್ಪು ಗಣೇಶ.
ಹೌದು! ಸ್ಯಾಂಡಲ್‌ವುಡ್ ನಟ ಪವರ್ ಸ್ಟಾರ್ ಪುನೀತ್‌ರಾಜಕುಮಾರ ಅವರು ಇನ್ನಿಲ್ಲವಾಗಿ ಹತ್ತು ತಿಂಗಳು ಕಳೆದಿವೆ. ಆದರೆ, ಅವರ ಜನಪರ ಕೆಲಸಗಳ ಮೂಲಕ ಅವರು ಇನ್ನೂ ಜೀವಂತವಾಗಿದ್ದಾರೆ. ಪ್ರಸಕ್ತ ವರ್ಷದ ಗಣೇಶ ಚತುರ್ಥಿಗೆ ಅಪ್ಪು ಅವರು ಎಲ್ಲರ ಮನೆಗಳಿಗೆ ಬರಲು ಸಿದ್ಧವಾಗಿದ್ದಾರೆ. ಗಣೇಶನ ಮೂರ್ತಿ ಕಲಾವಿದರು ಈ ಬಾರಿ ಗಣಪತಿ ಮೂರ್ತಿ ಜೊತೆಗೆ ಅಪ್ಪು ಕಲಾಕೃತಿಯನ್ನೂ ಮಾಡಿ ಗಮನಸೆಳೆದಿದ್ದಾರೆ.
ಧಾರವಾಡದಲ್ಲೂ ಈ ಬಾರಿ ಗಣಪತಿ ಜೊತೆಗಿರುವ ಅಪ್ಪು ಮೂರ್ತಿಗಳು ತಯಾರಾಗಿವೆ. ಈ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಪ್ಪು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಪ್ರಸಕ್ತ ವರ್ಷದ ಗಣೇಶೋತ್ಸವದಲ್ಲಿ ಅಪ್ಪು ಎಲ್ಲರ ಮನೆಗಲ್ಲಿ ರಾರಾಜಿಸಲಿದ್ದಾರೆ. ಧಾರವಾಡ ಹೊರವಲಯದ ನವಲೂರ ಗ್ರಾಮದ ಮೌನೇಶ ಕಮ್ಮಾರ ಎಂಬುವವರು ಈ ಗಣೇಶೋತ್ಸವಕ್ಕೆ ಅಪ್ಪು ಜೊತೆ ಗಣಪ್ಪ ಇರುವ ಮೂರ್ತಿ ತಯಾರಿಸಿದ್ದಾರೆ. ಹಲವು ಬಗೆಯ ಗಣಪ್ಪನನ್ನು ತಯಾರು ಮಾಡಿರುವ ಇವರು, ಅಪ್ಪು ನಿಧನರಾದಾಗ ಚಿಕ್ಕದೊಂದು ಪುನೀತ್ ರಾಜಕುಮಾರ ಮೂರ್ತಿ ತಯಾರಿ ಮಾಡಿದ್ದರು. ಅಲ್ಲದೇ ಅಪ್ಪು ಅಭಿಮಾನಿ ಕೂಡಾ ಈ ಮೂರ್ತಿ ನೋಡಿದ್ದ ಒಬ್ಬರು ಅದನ್ನ ಖರೀದಿ ಮಾಡಿದ್ದರು. ಈ ಹಿನ್ನೆಲೆ ಇದೇ ಅಲೋಚನೆಯಿಂದ ಇವರು ಯಾಕೆ ಅಪ್ಪು ಜೊತೆ ಗಣಪ್ಪನನ್ನ ತಯಾರಿ ಮಾಡಬಾರದು ಎಂದು ಅಪ್ಪು ಜೊತೆ ಇರುವ 8 ರೀತಿಯ ಗಣಪ್ಪನನ್ನು ತಯಾರಿ ಮಾಡಿದ್ದಾರೆ.
ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಮಂಡ್ಯ, ಮೈಸೂರು ಸೇರಿ ಹಲವು ಕಡೆಯಿಂದ ಈ ಮೂರ್ತಿಗಳಿಗೆ ಬೇಡಿಕೆ ಬಂದಿವೆ. ಹೀಗಾಗಿ ಮೌನೇಶ್ ಅಲ್ಲಿಯೂ ಅಪ್ಪು ಗಣೇಶನನ್ನು ಕಳುಹಿಸಿ ಕೊಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/08/2022 12:30 pm