ನವಲಗುಂದ : ಪ್ರಮುಖವಾಗಿ ಗಣೇಶ ಚತುರ್ಥಿ ಹಾಗೂ ದೀಪಾವಳಿ ಹಬ್ಬಗಳಿಗೆ ಹೆಚ್ಚಾಗಿ ಮಾರಾಟ ಆಗೋದು ಪಟಾಕಿ. ಪಟಾಕಿ ಎಂದಾಕ್ಷಣ ನೆನಪಾಗೋದು ನವಲಗುಂದ. ಯಾಕಂದ್ರೆ ನವಲಗುಂದ ಪಟಾಕಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಜಿಲ್ಲೆ, ಹೊರ ಜಿಲ್ಲೆಗಳಿಂದ ಪಟಾಕಿ ಕೊಳ್ಳಲು ಜನ ಇಲ್ಲಿಗೆ ಬರ್ತಾರೆ. ಆದರೆ ಈಗ ನವಲಗುಂದದ ಪಟಾಕಿ ವ್ಯಾಪಾರಸ್ಥರಿಗೆ ಸಂಕಷ್ಟ ಎದುರಾಗಿದೆ.
ಎಸ್... ನವಲಗುಂದ ಪಟ್ಟಣದ ಶಂಕರ ಕಾಲೇಜಿನ ಆವರಣದಲ್ಲಿ ಅಧಿಕಾರಿಗಳು ಪಟಾಕಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ ಸತತ ಮಳೆ ಹಾಗೂ ತಾತ್ಕಾಲಿಕ ಶೆಡ್ನಿಂದಾಗಿ ಈಗ ಪಟಾಕಿಗಳು ಹಾಳಾಗುತ್ತಿವೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ, ಸಂಪೂರ್ಣ ಸ್ಥಳ ಕೆಸರು, ಅಂಗಡಿಗಳಿಗೆ ಹೋಗೋಕು ಆಗದ ಪರಿಸ್ಥಿತಿ, ಇಂತಹ ದುಸ್ಥಿತಿಯಲ್ಲಿ ಗ್ರಾಹಕರು ಅಂಗಡಿಗಳಿಗೆ ಬರುತ್ತಿಲ್ಲ. ನಮಗೆ ವ್ಯಾಪಾರ ಸಹ ಆಗುತ್ತಿಲ್ಲ ಅನ್ನೋದು ನವಲಗುಂದದ ಪಟಾಕಿ ವ್ಯಾಪಾರಸ್ಥರ ಅಳಲು.
ಮಳೆಯಿಂದ ಪಟಾಕಿ ನೆನೆದು ಭಾರೀ ನಷ್ಟ ಆಗಿದೆ. ಸುರಕ್ಷಿತವಾದ ಹಾಗೂ ಮಾರುಕಟ್ಟೆಗೆ ಹತ್ತಿರದ ಸ್ಥಳದಲ್ಲಿ ಮಾರಾಟ ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸಿಕೊಡಬೇಕು ಅನ್ನೋದು ಮಾರಾಟಗಾರರ ಆಗ್ರಹವಾಗಿದೆ...
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
03/09/2022 04:52 pm