ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಧನೆ ಛಲಕ್ಕೆ ಪ್ರಾಮಾಣಿಕತೆ ಬಲ...ಹೆಮ್ಮೆ ಸಾಧಕ ಡಾ: ವಿ.ಎಸ್.ವಿ ಪ್ರಸಾದ್

ಸುಮಾರು ಮೂರು ದಶಕಗಳ ಹಿಂದಿನ ಮಾತು, ಓರ್ವ ಯುವ ಸಿವಿಲ್ ಇಂಜನೀಯರ್ ಕೈಯಲ್ಲಿ ಕೇವಲ 25 ಸಾವಿರ ಹಿಡಿದು ವಿಜಯವಾಡಾದಿಂದ ಹುಬ್ಬಳ್ಳಿಗೆ ಬಂದಿಳಿದ. ದುಡಿಯುವ ಛಲವಿದ್ದರೂ ಉದ್ಯೋಗವಿರಲಿಲ್ಲ, ತಲೆ ಮೇಲೆ ಸೂರಿಗಾಗಿ ಪರದಾಟ. ಆದರೆ ಇದ್ಯಾವುದಕ್ಕೂ ಜಗ್ಗದೆ ಅಸಹಾಯಕತೆಯಿಂದ ಕುಗ್ಗದೆ ಮುನ್ನುಗ್ಗಿ ನಡೆದ.

ಅಂದು ಕೇವಲ ಒಂದು ನೌಕರಿಗಾಗಿ ಅಲೆದ ಅದೇ ಯುವ ಇಂಜನೀಯರ್ ಇಂದು ನೂರಾರು, ಸಾವಿರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ನೀಡಿದ ಉದ್ಯೋಗದಾತ, ನಶಿಸಿ ಹೋಗುತ್ತಿರುವ ಉದ್ಯಮಗಳಿಗೆ ಪುಶ್ಚೇತನ ನೀಡುತ್ತಿರುವ ಯಶಸ್ವಿ ಉದ್ಯಮಿ. ಅವರು ಬೇರಾರು ಅಲ್ಲ ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರ ಚಿರುಗುಪಾಟಿ ಡಾ: ವಿ.ಎಸ್.ವಿ ಪ್ರಸಾದ್

ದುಡಿಯುವ ಛಲ, ಪ್ರಾಮಾಣಿಕ ಪ್ರಯತ್ನ, ನಯ ವಿನಯತೆ ಇದ್ದರೆ ಏನನ್ನಾದರೂ ಸಾಧಿಸಬಹುದು. ಅದಕ್ಕೆ ತಕ್ಕ ಹಾಗೆ ವಿದ್ಯೆ ಇದ್ದರಂತೂ ದೈವವೇ ಕೈಹಿಡಿದು ಮುನಡೆಸುತ್ತದೆಯಂತೆ ಎಂಬುದಕ್ಕೆ ನಮ್ಮ ಹುಬ್ಬಳ್ಳಿಯ ಜನಪ್ರಿಯ ಉದ್ಯಮಿ ಸ್ವರ್ಣ ಗ್ರುಫ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ ಪ್ರಸಾದ್ ಅವರಿಗಿಂತ ಬೇರೆ ಉದಾಹರಣೆ ಬೇಕೆ?

ಸ್ವರ್ಣ ಗ್ರುಪ್ ಆಫ್ ಕಂಪನೀಸ್ ಚೇರ್ಮನ್ ಡಾ : ವಿ ಎಸ್ ವಿ ಪ್ರಸಾದ್ ಸಾಧನೆಗಳ ಮೇರು ಪರ್ವತ, ಪ್ರಸಾಧ್ ಅವರ ಮೂರು ದಶಕಗಳಲ್ಲಿಯ ಸಾಧನೆ, ಇಂದಿನ ಯುವ ಸಮುದಾಯಕ್ಕೆ ಒಂದು ಮಾದರಿ, ಸ್ಪೂರ್ತಿ. ದೈವ ಭಕ್ತರೂ ಆಗಿರುವ ಇವರು, ಅಯ್ಯಪ್ಪಸ್ವಾಮಿ ಆರಾಧಕರೂ ಹೌದು.

ಅವಿರತ ಪರಿಶ್ರಮ, ಪ್ರಾಮಾಣಿಕ ಪ್ರಯತ್ನದಿಂದಾಗಿ ಕೇವಲ ಐದು ಲಕ್ಷ ರೂಗಳಲ್ಲಿ ಆರಂಭವಾದ ಇವರ ಉದ್ಯಮ ಇಂದು, ಸ್ವರ್ಣ ಕನ್ಸಸ್ಟ್ರಕ್ಶನ್ ಪ್ರೈ.ಲಿ, ರೇಲ್ವೆ ಕಾಂಕ್ರೀಟ್ ಸ್ಲೀಪರ್ ಪ್ಲಾಂಟ್, ಸ್ವರ್ಣ ಪೇವರ್ಸ& ಬ್ರಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್, ಹೊಟೇಲ್, ರೀಯಲ್ ಎಸ್ಟೇಟ್, ಸ್ಟೋನ್ ಕ್ರಶಿಂಗ್, ರೇಲ್ವೆ ಗುತ್ತಿಗೆ, ಜಾಹೀರಾತು ಹೀಗೆ ದೇಶದಾದ್ಯಂತ ಹಲವಾರು ಕ್ಷೇತ್ರಗಳಲ್ಲಿ ಇವರ ಹೆಜ್ಜೆ ಗುರುತು ಕಾಣಬಹುದು.

ಹುಬ್ಬಳ್ಳಿಯ ಪ್ರತಿಷ್ಠಿತ ಬಿಡಿಕೆ ಉದ್ಯಮವೊಂದು ಅಮೇರಿಕದ ಪಾಲಾಗಿತ್ತು. ಈಗ ಟ್ರಿಲಿಯಂ ಫ್ಲೋ ಟೆಕ್ನಾಲಜಿಸ್ ಆಗಿ ಪರಿವರ್ತನೆ ಹೊಂದಿರುವ ಆ ಅಮೇರಿಕದ ಕಂಪನಿಯನ್ನು ಪ್ರಸದ್ ಅವರು ಮರಳಿ ಖರೀದಿಸಿ ಹುಬ್ಬಳ್ಳಿಯ ಹಿರಿಮೆ ಗರಿಮೆ ಹೆಚ್ಚಿಸಿ ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿ ಗೌರವಕ್ಕೆ ಪಾತ್ರರಾಗಿದ್ದಾರೆ. ಸಾವಿರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ನೀಡಿ ಆಶ್ರಯದಾತರಾಗಿದ್ದಾರೆ.

ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡಬೇಕು, ನೊಂದವರಿಗೆ ಸಹಾಯ ಹಸ್ತ ಚಾಚಬೇಕು ಎಂದು ಸದಾ ತುಡಿಯುವವರು. ಇವರ ಸೇವೆಯನ್ನು ಗುರುತಿಸಿ ಶ್ರೀಲಂಕಾದ ಕೋಲೊಂಬೋ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದರೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಂತೂ ಬಡಬಗ್ಗರಿಗೆ ಅನ್ನದಾತರಾದವರು. ಗ್ರಾಮೀಣ ಮಕ್ಕಳಿಗೆ ಪುಸ್ತಕ ಸಮವಸ್ತ್ರ ನೀಡುತ್ತ ಶಿಕ್ಷಣ ಪ್ರೇಮ ಮರೆದವರು, ಉದಯೋನ್ಮುಖ ಪ್ರತಿಭೆಗಳನ್ನು ಸಂಗೀತ, ಕಲೆಯನ್ನು ಪ್ರೋತ್ಸಾಹಿಸುವ ಸಾಂಸ್ಕೃತಿಕ ರಾಯಭಾರಿ.

ಔದ್ಯಮಿಕ, ಶೈಕ್ಷಣಿಕ, ವೈದ್ಯಕೀಯ, ಸಾಮಾಜಿಕ ಹಾಗೂ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದು ಇತರರಿಗೆ ಮಾದರಿಯಾದ ಸಾಧಕರನ್ನು ಪರಿಚಯಿಸುತ್ತಿದೆ ನಿಮ್ಮ PublicNext.

ಸಂದರ್ಶನ : ಶೃತಿ ಜೈನ್

ಮಾರ್ಗದರ್ಶನ : ಕೇಶವ ನಾಡಕರ್ಣಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/06/2022 08:53 am

Cinque Terre

78.95 K

Cinque Terre

2

ಸಂಬಂಧಿತ ಸುದ್ದಿ