ಹುಬ್ಬಳ್ಳಿ: ಸಾಕಷ್ಟು ಜನಪರ ಕಾರ್ಯಗಳ ಮೂಲಕ ಹೆಸರು ಮಾಡಿರುವ ದೇಶಪಾಂಡೆ ಫೌಂಡೇಶನ್ ಈಗ ಹುಬ್ಬಳ್ಳಿಯಲ್ಲಿ ಮತ್ತೊಂದು ಆವಿಷ್ಕಾರದ ಮೂಲಕ ಸ್ಟಾರ್ಟ್ ಅಫ್ ಪ್ರೋತ್ಸಾಹಕ್ಕೆ ಮುಂದಾಗಿದ್ದು, ಈಗ ಹೊಸ ಅಭಿಯಾನವನ್ನು ಹಮ್ಮಿಕೊಂಡಿದೆ.
ಸ್ಟಾರ್ಟ್ ಅಫ್ ಬೆಳವಣಿಗೆಗೆ ಸೂಕ್ತ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ವಿನೂತನ ಕಾರ್ಯಕ್ಕೆ ಮುಂದಾಗಿದೆ.
ದೇಶಪಾಂಡೆ ಫೌಂಡೇಶನ್ ಸ್ಟಾರ್ಟ್ ಅಫ್ ವತಿಯಿಂದ ಇದೇ 11ರಂದು ಸ್ಟಾರ್ಟ್ ಅಫ್ ಡೈಲಾಗ್ ಭಾರತ ಆ್ಯಂಡ್ ಬಯಾಂಡ್ ಉದ್ಯಮಶೀಲತಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿದ್ದು, ಉದ್ಯಮಶೀಲತೆ ಅಭಿವೃದ್ಧಿಗೆ ಬುನಾದಿ ಹಾಕಲು ನಿರ್ಧಾರ ಮಾಡಿದೆ.
ಇನ್ನೂ ಉದ್ಯಮಶೀಲತೆ ಸಭೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ದೇಶಪಾಂಡೆ ಫೌಂಡೇಶನ್ ಸಹಸಂಸ್ಥಾಪಕ ಗುರುರಾಜ ದೇಶ ದೇಶಪಾಂಡೆ, ಜಯಶ್ರೀ ದೇಶಪಾಂಡೆ ಅವರು ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ನೆಟ್ವರ್ಕ್ 18 ಗ್ರೂಪ್ ಅಧ್ಯಕ್ಷ ಅದಿಲ್ ಜೈನುಬಾಯ್ ಆಗಮಿಸಲಿದ್ದಾರೆ.
ಕೋವಿಡ್ ನಂತರದಲ್ಲಿ ಸ್ಟಾರ್ಟ್ ಅಫ್ ಗಳಿಗೆ ಸೂಕ್ತ ಉತ್ತೇಜನ ನೀಡುವ ಮೂಲಕ ಭವ್ಯ ಭಾರತದ ಆರ್ಥಿಕ ಹಾಗೂ ತಂತ್ರಜ್ಞಾನದ ಅಭಿವೃದ್ಧಿಗೆ ಅಡಿಪಾಯ ಹಾಕಲು ಕಾರ್ಯಕ್ರಮ ಆಯೋಜಿಸಲಾಗಿದ್ದು, ನಿಮ್ಮ ಪಬ್ಲಿಕ್ ನೆಕ್ಸ್ಟ್ ಕೂಡ ಸ್ಟಾರ್ಟ್ ಅಫ್ ನ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ.
ಒಟ್ಟಿನಲ್ಲಿ ಇಂತಹದೊಂದು ಮಹತ್ವದ ಕಾರ್ಯದ ಮೂಲಕ ದೇಶದ ಅಭಿವೃದ್ಧಿಗೆ ದೇಶಪಾಂಡೆ ಫೌಂಡೇಶನ್ ಅಡಿಪಾಯ ಹಾಕಲು ಮುಂದಾಗಿದ್ದು, ಉದ್ಯಮಶೀಲತೆ ಅಭಿವೃದ್ಧಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/06/2022 02:05 pm