ಹುಬ್ಬಳ್ಳಿ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಬ್ರಾಹ್ಮಣ ಯುವಕ ಯುವತಿಯರಿಗೆ ಆರ್ಥಿಕ ಸಬಲೀಕರಣ ಹೊಂದಲು, ಸ್ವ ಉದ್ಯೋಗ ಕೈಗೊಳ್ಳುವ ದಿಶೆಯಿಂದ ಸಾಲ ಯೋಜನೆಯನ್ನು ಕೆನರಾ ಬ್ಯಾಂಕಿನ ಒಪ್ಪಂದ ಮೂಲಕ ಕೈಗೊಂಡಿದ್ದು ,ಸ್ವ - ಉದ್ಯೋಗ ಮಾಡುವ ಯುವಕ ಯುವತಿಯರಿಗೆ ಶೇ.20 ಸಬ್ಸಿಡಿಯೊಂದಿಗೆ 1 ಲಕ್ಷ ರೂಪಾಯಿ ಸಾಲವನ್ನು ಕೊಡಲು ಹೊಸ ಯೋಜನೆ ಮಾಡಲಾಗಿದೆ ಎಂದು ವಿಶ್ವ ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಚಿದಂಬರ ಕುಲಕರ್ಣಿ ಹೇಳಿದರು.
ನಗರದಲ್ಲಿಂದು ಮಾತಾನಾಡಿ ಅವರು, ಬ್ರಾಹ್ಮಣ ಯುವಕ ಯುವತಿಯರಿಗೆ ಶಿಕ್ಷಣ ಉತ್ತೇಜನಕ್ಕಾಗಿ ಹೊಸ ಯೋಜನೆ ಮಾಡಲಾಗಿದೆ. ಇನ್ನು ಕರ್ನಾಟಕ ಸರಕಾರ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿದ ನಂತರ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಸಚ್ಚಿದಾನಂದ ದತ್ತಮೂರ್ತಿಯವರು ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇನ್ನು ಈ ಯೋಜನೆಗೆ ಫಲಾನುಭವಿಗಳು EWS ಸರ್ಟಿಫಿಕೇಟ್ , ಕೆನರಾ ಬ್ಯಾಂಕಿನ ಖಾತೆ ಮತ್ತು ತಾವು ಕೈಗೊಳ್ಳುವ ಉದ್ಯೋಗದ ಕುರಿತು ಮಾಹಿತಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವೆಬ್‌ಸೈಟ್ ksbdb.karnataka.gov.in ಮಾಹಿತಿ ನೀಡಿದೆ.Mob- 080-29605888 ಸಂಪರ್ಕಿಸಬಹುದಾಗಿದೆ. ಆದ್ದರಿಂದ ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
Kshetra Samachara
04/02/2022 04:19 pm