ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಅಲ್ತಾಪ್ ಬೇಪಾರಿ ಆಯ್ಕೆ

ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರದ ಚಿಕನ್ ವ್ಯಾಪಾರಸ್ಥರ ಸಂಘದ ಸರ್ವಸಾಧಾರಣ ಸಭೆ ನಗರದ ಕಾರವಾರ ರಸ್ತೆ ಅಲ್ ತಾಜ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇದೇ ವೇಳೆ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಬ್ದುಲ್ ರಹಿಮಾನ್ ಮುಲ್ಲಾ, ನಾಗರಾಜ ಪಟ್ಟಣ, ಅವರನ್ನು ಸಭಾಧ್ಯಕ್ಷರಾಗಿ ನೇಮಿಸಲಾಗಿತ್ತು. ಹಾಗೂ ಸಭಾಧ್ಯಕ್ಷರ ಮುಖಾಂತರ ಎಲ್ಲ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘದ ನೂತನ ಅಧ್ಯಕ್ಷರಾಗಿ ಅಲ್ತಾಫ್ ಬೇಪಾರಿ ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಸಲಿಂ ಮಿಶ್ರಿಕೋಟಿ, ಕಾರ್ಯದರ್ಶಿಯಾಗಿ ಮಹಮ್ಮದಜಾಫರ ತಡಸ, ಸಹ ಕಾರ್ಯದರ್ಶಿ ಫೈರೋಜ ಬೆಳಗಾಂ, ಕೋಶಾಧ್ಯಕ್ಷರಾಗಿ ಹುಸೇನ್, ಸದಸ್ಯರಾಗಿ ಇನ್ಸಮಿಯ್ಯಾನವರ, ಹನೀಫ್ ಬೈರಕದಾರ್, ಆನಂದ್ ಜಿಗಣಿಕರ್, ಬಶೀರಹಮದ ಹವಾಲ್ದಾರ್, ಮಹಮದ್ಅಲಿ ಕಮಡೊಳ್ಳಿ, ಸಜದಾನಿ ಇನ್ಸೂಮಿಯಾನವರ,ಆನಂದ ಯಲ್ಲಪ್ಪ ಜಗಲೀಕರ್,ರಾಜೇಶ್ ಶೆಟ್ಟಿ, ಅವರನ್ನು ಆಯ್ಕೆ ಮಾಡಲಾಯಿತು.

Edited By : Nagaraj Tulugeri
Kshetra Samachara

Kshetra Samachara

25/01/2022 06:05 pm

Cinque Terre

7.76 K

Cinque Terre

2

ಸಂಬಂಧಿತ ಸುದ್ದಿ