ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಿಮ್ಮ ಕನಸಿನ ಕಾರ್ ಖರೀದಿ ಹಾಗೂ ಮನೆ ನಿರ್ಮಾಣಕ್ಕೆ ಎಸ್.ಬಿ.ಐ ಬೆಂಬಲ: ವಾಣಿಜ್ಯನಗರಿಯಲ್ಲಿ ಸಾಲ ಮೇಳ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಜನರ ಕನಸಿನ ಮನೆ ನಿರ್ಮಾಣ ಹಾಗೂ ಕನಸಿನ ವಾಹನ ಖರೀದಿಯ ಕನಸನ್ನು ನನಸು ಮಾಡುವ ಸದುದ್ದೇಶದಿಂದ ಎಸ್.ಬಿ.ಐ 400 ಕೋಟಿ ಸಾಲ ಉತ್ಸವದ ಮೂಲಕ ಗ್ರಾಹಕರ ಅವಶ್ಯಕತೆ ಅನುಗುಣವಾಗಿ ಸಾಲ ಒದಗಿಸಲು ಮುಂದಾಗಿದೆ.

ವರ್ಲ್ಡ್ ಸ್ಕ್ವೈರ್ ಸಹಯೋಗದಲ್ಲಿ ಎಸ್ ಬಿಐ ವತಿಯಿಂದ ಹುಬ್ಬಳ್ಳಿಯ ವಿದ್ಯಾನಗರದ ರಾಯ್ಕರ್ ಮೈದಾನದಲ್ಲಿ ಆಯೋಜಿಸಲಾಗಿದ್ದ, ಎರಡು ದಿನಗಳ ಬೃಹತ್ ಮನೆ ಮತ್ತು ಕಾರ್ ಸಾಲ ಉತ್ಸವಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡಿದರು.

ಇನ್ನೂ ಮನೆ ಮತ್ತು ಕಾರ್ ಲೋನ್ ಕಳೆದ ಎರಡು ವರ್ಷದಿಂದ ಮಾಡಲಾಗಿರಲಿಲ್ಲ. ಸಾರ್ವಜನಿಕರು ಈ ಉತ್ಸವದ ಸದುಪಯೋಗ ಪಡೆದುಕೊಳ್ಳಬೇಕು. ಕನಸಿನ ಮನೆ ಕಟ್ಟಲು ವ್ಯವಸ್ಥಿತ ಲೋನ್ ಬೇಕು. ಈ ನಿಟ್ಟಿನಲ್ಲಿ ನಾಗರಿಕರಿಗೆ, ಬಿಲ್ಡರ್ಸ್ ಗೆ ಉತ್ಸವ ಸಾಕಷ್ಟು ಅನುಕೂಲವಾಗಲಿದೆ. ಬಹಳಷ್ಟು ಕಡಿಮೆ ಬಡ್ಡಿದರದಲ್ಲಿ‌ ನಿಮ್ಮ ಕನಸಿನ ಕಾರ್ ಹಾಗೂ ಮನೆ ನಿರ್ಮಾಣಕ್ಕೆ ಅವಕಾಶವಿದೆ ಎಂದು ಎಸ್.ಬಿ.ಐ ಬ್ಯಾಂಕಿನ ವ್ಯವಸ್ಥಾಪಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನೂ ಈ ಉತ್ಸವ ಸಾಲ ಕೊಡುವಂತದ್ದು, ನಾವೇ ಹೋಗಿ ಬ್ಯಾಂಕಿಗೆ ಅಲೆದಾಡುವುದಕ್ಕಿಂತ ಈಗ ಬ್ಯಾಂಕ್ ಜನರ ಬಳಿ ಬಂದಿದೆ. ಕೊರೋನಾ ಹಿನ್ನಲೆಯಲ್ಲಿ ಇಂತ ಕಾರ್ಯಕ್ರಮ ನಡೆದಿರಲಿಲ್ಲ. ಇಂದು ಸಾಲ ಪಡೆಯುವುದೆ ಒಂದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಇದೊಂದು ಉತ್ತಮ ಅವಕಾಶವಾಗಿದೆ. ನಗರ ಪ್ರದೇಶಗಳಲ್ಲಿ ಸ್ಥಳದ ಅಭಾವದಿಂದ ಅಪಾರ್ಟ್ಮೆಂಟ್ ಗಳ ಪ್ರಾರಂಭವಾಗಿವೆ. ಕೊರೋನಾ ನಂತರ ಈ ರೀತಿ ಮನೆ ಖರೀದಿಗೆ ಹೆಚ್ಚಿನ ಜನ ಆಸಕ್ತಿ ವಹಿಸಿದ್ದಾರೆ. ಬಿಲ್ಡರ್ಸ್ ಕೂಡ ಜನರಿಗೆ ಅನುಕೂಲವಾಗುವ ಮನೆ ನಿರ್ಮಾಣ ಮಾಡಬೇಕು.

ಒಟ್ಟಿನಲ್ಲಿ ಎಸ್.ಬಿ.ಐ ಕಾರ್ ಮತ್ತು ಮನೆ ಸಾಲ ಉತ್ಸವದಲ್ಲಿ ಸುಮಾರು 40 ಸ್ಟಾಲ್ ಗಳನ್ನು ಹಾಕಲಾಗಿದ್ದು, ಗ್ರಾಹಕರು ಉತ್ತಮ ರೀತಿಯಲ್ಲಿ ಸ್ಪಂದಿಸಿ ಸಾಲದ ಬಗ್ಗೆ ಮಾಹಿತಿ ಕಲೆ ಹಾಕಿರುವುದು ವಿಶೇಷವಾಗಿದೆ.

Edited By : Manjunath H D
Kshetra Samachara

Kshetra Samachara

30/10/2021 05:47 pm

Cinque Terre

24.25 K

Cinque Terre

4

ಸಂಬಂಧಿತ ಸುದ್ದಿ