ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ಟಾರ್ಟ್ಅಪ್ ಗಳಿಗೆ ಉತ್ತೇಜನ ನೀಡುವ ಬಿಯಾಂಡ್ ಬೆಂಗಳೂರು: ಫುಲ್ ಚೇಂಜ್ ಆಗಲಿದೆ ಅವಳಿನಗರ

ಹುಬ್ಬಳ್ಳಿ: ರಾಜ್ಯ ಅಂದರೆ ಬೆಂಗಳೂರು ಮಾತ್ರ ಎಂಬುವಂತ ಮಾತನ್ನು ದೂರ ತಳ್ಳಿ ರಾಜ್ಯ ಸರ್ಕಾರ ಈಗ ಬೆಂಗಳೂರಿನಂತೆ ರಾಜ್ಯದ ಉತ್ತರ ಕರ್ನಾಟಕದ ನಗರಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಇನ್ವೆಸ್ಟ್ ಕರ್ನಾಟಕದ ನಂತರ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೊಂದು ಯೋಜನೆ ಚಿಗುರೊಡೆಯುತ್ತಿದೆ ಹಾಗಿದ್ದರೇ ಯಾವುದು ಆ ಯೋಜನೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್...

ಬೆಂಗಳೂರಿನಂತೆ ಉತ್ತರ ಕರ್ನಾಟಕದ ನಗರಗಳು ಅಭಿವೃದ್ಧಿ ಹೊಂದಬೇಕು. ಅದರಲ್ಲೂ ಕಲಬುರಗಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬೆಳಗಾವಿ ಅಭಿವೃದ್ಧಿ ಹೊಂದಬೇಕು ಎಂಬುವಂತ ಸದುದ್ದೇಶದಿಂದ ಕರ್ನಾಟಕ ಸರ್ಕಾರ ಬಿಯಾಂಡ್ ಬೆಂಗಳೂರು ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಲಾಯಿತು.ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಕೌಶಲ್ಯವಿದೆ, ಅವರಿಗೆ ಸಹಕಾರ ಬೇಕಿದೆ. ಸರ್ಕಾರದಿಂದ ಅವಕಾಶಗಳು ಬೇಕು, ಅವರನ್ನ ಗುರುತಿಸಬೇಕಿದೆ. ಕರ್ನಾಟಕ ಈಗ ಸ್ಟಾರ್ಟ್ ಅಪ್ ನಂಬರ್ ಒನ್ ಆಗುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಇಂತಹದೊಂದು ನಿರ್ಧಾರಕ್ಕೆ ಮುಂದಾಗಿದೆ.

ಇನ್ನೂ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಸ್ಟಾರ್ಟ್ಅಪ್ ಗಳಿಗೆ ಉತ್ತೇಜನ ನೀಡಿ ಉದ್ಯೋಗ ಸೃಷ್ಟಿಯ ಜೊತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಗುರಿಯನ್ನು ಬಿಯಾಂಡ್ ಬೆಂಗಳೂರು ಯೋಜನೆ ಹೊಂದಿದೆ.

ಒಟ್ಟಿನಲ್ಲಿ ಬಿಯಾಂಡ್ ಬೆಂಗಳೂರು ಯೋಜನೆ ವ್ಯವಸ್ಥಿತವಾಗಿ ಮುನ್ನಡೆದು ಇಲ್ಲಿನ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯುವ ಜೊತೆಗೆ ಉದ್ಯೋಗ ಸೃಷ್ಟಿಯಾಗಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Nagesh Gaonkar
Kshetra Samachara

Kshetra Samachara

05/10/2021 05:15 pm

Cinque Terre

51.18 K

Cinque Terre

1

ಸಂಬಂಧಿತ ಸುದ್ದಿ