ಕುಂದಗೋಳ : ಸ್ಪರ್ಧೆ ಮೇಲೆ ಸ್ಪರ್ಧೆಯಲ್ಲಿ ಗೆಲುವನ್ನು ಕಾಣುತ್ತಿರುವ ಸುಗ್ರೀವ್ ಅದೆಷ್ಟೋ ಸ್ಪರ್ಧಾ ಪ್ರೇಮಿಗಳ ಮನಸ್ಸನ್ನು ಗೆದ್ದು, ತನ್ನ ಬೆಲೆಯನ್ನು ಒಂದು ಲಕ್ಷ ಐವತ್ತು ಸಾವಿರವರೆಗೆ ಹೆಚ್ಚಿಸಿಕೊಂಡು ಮಾಲೀಕರ ಮನೆಯಲ್ಲಿದ್ದಾನೆ.
ಈ ಸುಗ್ರೀವ್ ಎಂಬ ಟಗರೊಂದು ಟಗರಿನ ಕಾಳಗದಲ್ಲಿ ಸರದಿ ಸಾಲು ಗೆಲುವನ್ನು ಕಾಣುತ್ತಾ, ಅದೆಷ್ಟೋ ಕಾಳಗ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದು ಈಗಾಗಲೇ ಗೋಕಾಕ್, ಉಗರಗೋಳದ ಜನರು ಕುಂದಗೋಳ ಪಟ್ಟಣದ ಶಿವಾನಂದ ಮುಳ್ಳೊಳ್ಳಿಯವರ ಸುಗ್ರೀವ್ ಎಂಬ ಹೆಸರಿನ ಟಗರಿಗೆ ಲಕ್ಷ ಒಂದೂವರೆ ಲಕ್ಷ ಬೆಲೆ ಕೊಡುತ್ತೇವೆ ಎಂದು ಕೇಳುತ್ತಿದ್ದಾರೆ.
ಈ ಸುಗ್ರೀವ್ ಎಂಬ ಟಗರು 2 ಹಲ್ಲು ಹಚ್ಚಿದಾಗ 25 ಸಾವಿರದ 2 ಸ್ಪರ್ಧೆ, 30 ಸಾವಿರದ ಒಂದು ಸ್ಪರ್ಧೆ ಗೆದ್ದಿದ್ದು, ನಾಲ್ಕು ಹಲ್ಲು ಹಚ್ಚಿದಾಗ 15 ಸಾವಿರ ಬಹುಮಾನದ ನಾಲ್ಕು ಬಹುಮಾನ ಪಡೆದಿದೆ, ಸಧ್ಯ ಆರು ಹಲ್ಲಿನ ಸುಗ್ರೀವ ಹತ್ತು ಸಾವಿರದ ಒಂದು ಸ್ಪರ್ಧೆಯಲ್ಲಿ ವಿಜೇತನಾಗಿ ಕಾಳಗ ಪ್ರೇಮಿಗಳಿಂದ ಒಂದೂವರೆ ಲಕ್ಷ ಬೆಲೆ ಸಂಪಾದಿಸಿದ್ದರೂ ಮಾರಾಟವಾಗದೇ ಮಾಲೀಕ ಶಿವಾನಂದ ಮುಳ್ಳೊಳ್ಳಿಯವರ ಮನೆಯಲ್ಲಿದ್ದು ತನ್ನ ವಯಸ್ಸಿನ ಟಗರುಗಳಲ್ಲೇ ದಾಖಲೆ ಬೆಲೆ ಪಡೆದುಕೊಂಡಿದ್ದಾನೆ.
Kshetra Samachara
11/11/2021 04:04 pm