ಧಾರವಾಡ: ಕೋವಿಡ್ ಹಾಗೂ ನೆರೆ ಪ್ರವಾಹದ ಕಾರಣದಿಂದಾಗಿ ಎರಡು ವರ್ಷಗಳಿಂದ ನಿಂತು ಹೋಗಿದ್ದ ಧಾರವಾಡದ ಕೃಷಿ ಮೇಳಕ್ಕೆ ಪ್ರಸಕ್ತ ವರ್ಷ ಚಾಲನೆ ದೊರೆತಿದ್ದು, ಮೊದಲ ದಿನ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನ ಬಂದು ಕೃಷಿ ಮೇಳವನ್ನು ಮೊದಲ ದಿನವೇ ಯಶಸ್ವಿಗೊಳಿಸಿದ್ದಾರೆ.
ಇಂದು ಭಾನುವಾರವಾಗಿದ್ದರಿಂದ ಧಾರವಾಡ, ಗದಗ, ಹಾವೇರಿ, ರಾಯಚೂರು, ಬೆಳಗಾವಿ, ಉತ್ತರ ಕನ್ನಡ, ಬೀದರ್, ಕಲಬುರ್ಗಿ ಸೇರಿದಂತೆ ಅನೇಕ ಜಿಲ್ಲೆಗಳಿಂದ ರೈತರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ.
ಈ ಸಂಬಂಧ ನಮ್ಮ ಪ್ರತಿನಿಧಿ ಪ್ರವೀಣ ಓಂಕಾರಿ ಅವರು ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/09/2022 07:13 pm