ಅಳ್ನಾವರ: ಅಳ್ನಾವರ ಪಟ್ಟಣದಲ್ಲಿ ಬಹು ದಿನಗಳಿಂದ ಇದ್ದ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಂತಾಗಿದೆ. ನಿನ್ನೆ ರಾತ್ರಿ ಅಳ್ನಾವರ ಪಟ್ಟಣಕ್ಕೆ ದಾಂಡೇಲಿಯ ಕಾಳಿ ನದಿಯಿಂದ ಕುಡಿಯುವ ನೀರನ್ನು ತರುವ ಕಾಳಿ ಯೋಜನೆ ಯಶಸ್ವಿಯಾಗಿದೆ. ಸುಮಾರು 8-10 ವರ್ಷಗಳಿಂದ ಅಳ್ನಾವರ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಭೀಕರವಾಗಿತ್ತು. ಪಕ್ಕದ ಹಳ್ಳಿಗಳಿಂದ ಟ್ಯಾಂಕರ್ ಮೂಲಕ ನೀರನ್ನ ತಂದು ಪಟ್ಟಣದ ಜನರಿಗೆ ಒದಗಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೇಸಿಗೆ ಕಾಲ ಬಂತೆಂದರೆ ಅಳ್ನಾವರದ ಜನತೆಗೆ ನೀರಿನ ಬರ ಪ್ರಾರಂಭವಾಗುತ್ತಿತ್ತು.
ಕಾಳಿ ನದಿ ಹೋರಾಟ ಸಮಿತಿಯ ಹಾಗೂ ಪಟ್ಟಣದ ಜನತೆಯ ಸುಮಾರು ಹತ್ತು ವರ್ಷಗಳ ಸತತ ಹೋರಾಟದ ಫಲವಾಗಿ ನಿನ್ನೆ ರಾತ್ರಿ ಪಟ್ಟಣಕ್ಕೆ ಕಾಳಿ ನದಿ ನೀರು ಬಂದು ತಲುಪಿತು. ಈ ಸಂದರ್ಭದಲ್ಲಿ ಪಟ್ಟಣದ ಜನತೆ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು.
ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ.
Kshetra Samachara
05/04/2022 07:03 pm