ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕ ಇಳುವರಿಗಾಗಿ ವಿಜ್ಞಾನಿಗಳು ಹೇಳುವ ವಿಚಾರಗಳನ್ನು ಅಳವಡಿಸಿಕೊಳ್ಳಲು ಸಲಹೆ

ಧಾರವಾಡ: ಜಿ-2-52 ಎಂಬ ಶೇಂಗಾ ತಳಿಯು ಎಕರೆಗೆ 14 ಕ್ವಿಂಟಲ್ ಇಳುವರಿ ನೀಡುವ ತಳಿಯಾಗಿದ್ದು, ದಪ್ಪ, ಸಮನಾದ ಕಾಯಿ ಹಾಗೂ ಕಾಳು ಹೊಂದಿದೆ. ನೋಡಿ ತಿಳಿ ಮಾಡಿ ಕಲಿ ಎಂಬ ವಿಚಾರಧಾರೆಯನ್ನು ತಿಳಿಸಿ ಅಧಿಕ ಇಳುವರಿ ಬೇಸಾಯಕ್ಕಾಗಿ ವಿಜ್ಞಾನಿಗಳು ಹೇಳುವ ವಿಚಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಕೇಂದ್ರೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಕೇಂದ್ರದ ಪ್ರಧಾನ ಬೇಸಾಯ ಶಾಸ್ತ್ರಜ್ಞ ಡಾ.ಬಿ.ಜಿ. ಶಿವಕುಮಾರ ಅವರು ಹೇಳಿದರು.

ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ (ವಾಲ್ಮಿ) ಆವರಣದಲ್ಲಿ ಆಯೋಜಿಸಿದ್ದ ಶೇಂಗಾ ಬೆಳೆ ಕ್ಷೇತ್ರೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಲೆ ಚುಕ್ಕೆ ಹಾಗೂ ಭಂಡಾರ ರೋಗ ನಿರೋಧಕ ಶಕ್ತಿ ಹೊಂದಿದ ಬೆಳೆಯಾಗಿದೆ. ಶೇಂಗಾ ತಳಿಯು 105 ರಿಂದ 110 ದಿನಗಳಲ್ಲಿ ಮಾಗುವ ತಳಿಯಾಗಿದ್ದು ಕೃಷಿ ವಿಶ್ವವಿದ್ಯಾಲಯ, ಧಾರವಾಡದಿಂದ ಬಿಡುಗಡೆ ಹೊಂದಿದೆ ಎಂದು ಹೇಳಿದರು.

ವಾಲ್ಮಿ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಮಾತನಾಡಿ, ರೈತರ ಸೇವೆಗಾಗಿ ವಾಲ್ಮಿ ಸಂಸ್ಥೆ ಸದಾ ಸಿದ್ಧವಿದ್ದು, ವಿಜ್ಞಾನಿಗಳು ನೀಡುವ ಹೊಸ ಹೊಸ ಆವಿಷ್ಕಾರಗಳನ್ನು ಅರಿತು ಅಳವಡಿಸಿಕೊಂಡು ತಮ್ಮ ಬದುಕನ್ನು ಉನ್ನತ ಮಟ್ಟದತ್ತ ಕೊಂಡೊಯ್ಯಬೇಕು. ನೀರು ಬಳಕೆದಾರರ ಸಹಕಾರ ಸಂಘಗಳು ಕೇವಲ ನೀರು ಪೂರೈಸುವುದಕ್ಕೆ ಮಾತ್ರವಿರದೇ ವಿವಿಧ ರೀತಿ ಸೇವೆ ನೀಡುವಲ್ಲಿ ಮುಂದಾಗಿ ಮಧ್ಯವರ್ತಿಗಳ ಹಾವಳಿಯಿಂದ ರೈತರು ಮುಕ್ತರಾಗಿ ನಿಮ್ಮದೇ ಸಂಘಟನೆ ಮೂಲಕ ಆರ್ಥಿಕ ಮೂಲಗಳನ್ನು ಬಲವರ್ಧನೆಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.

ಡಾ. ಬಸವರಾಜ ಏಣಗಿ, ಡಾ. ವಿ.ಐ. ಬೆಣಗಿ ಹಾಗೂ ಡಾ. ಬಿ.ಎಸ್. ಮೋಟಗಿ ವಿಜ್ಞಾನಿಗಳು ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿ ರೈತರನ್ನು ಉದ್ದೇಶಿಸಿ ಮಾತನಾಡಿದರು.

ಶೇಂಗಾ ಬೆಳೆಯುವ ಕ್ಷೇತ್ರಗಳಾದ ರಾಮದುರ್ಗ ತಾಲ್ಲೂಕಿನ ಚಿಲಮೂರು ಸವದತ್ತಿ ತಾಲ್ಲೂಕಿನ ಹೂಲಿ ಹಾಗೂ ನವಲಗುಂದ ಹಾಗೂ ಧಾರವಾಡ ಸುತ್ತಲಿನ ವಿವಿಧ ಹಳ್ಳಿಗಳಿಂದ ನೂರಕ್ಕೂ ಹೆಚ್ಚು ರೈತರು ಪಾಲ್ಗೊಂಡು ಕ್ಷೇತ್ರೋತ್ಸವದ ಪ್ರಯೋಜನ ಪಡೆದರು.

Edited By : Nirmala Aralikatti
Kshetra Samachara

Kshetra Samachara

01/10/2022 03:05 pm

Cinque Terre

10.38 K

Cinque Terre

0

ಸಂಬಂಧಿತ ಸುದ್ದಿ