ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೃಷಿ ಮೇಳಕ್ಕೆ ಮೊದಲ ದಿನವೇ ಮೆರಗು ತಂದ ಜನತೆ

ಧಾರವಾಡ: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿಂತು ಹೋಗಿದ್ದ ಧಾರವಾಡದ ಕೃಷಿ ಮೇಳ ಪ್ರಸಕ್ತ ವರ್ಷ ಅದ್ಧೂರಿಯಿಂದ ನಡೆಯುತ್ತಿದೆ. ಶನಿವಾರ ಕೃಷಿ ಮೇಳದ ಅಂಗವಾಗಿ ಬೀಜ ಮೇಳ, ಫಲ, ಪುಷ್ಪ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ನಾಳೆಯಿಂದ ಮೂರು ದಿನಗಳ ಕಾಲ ಕೃಷಿ ಮೇಳಕ್ಕೆ ಅಧಿಕೃತವಾಗಿ ಚಾಲನೆ ದೊರೆಯುತ್ತದೆಯಾದರೂ ಶನಿವಾರವೇ ಕೃಷಿ ಮೇಳಕ್ಕೆ ಭರಪೂರ ಸ್ಪಂದನೆ ದೊರೆತಿದೆ. ಬೆಳಿಗ್ಗೆ ಕಡಿಮೆ ಪ್ರಮಾಣದಲ್ಲಿದ್ದ ಜನತೆ ಮಧ್ಯಾಹ್ನದ ನಂತರ ದೊಡ್ಡ ಪ್ರಮಾಣದಲ್ಲಿ ಆಗಮಿಸಿ ಫಲ, ಪುಷ್ಪ ಪ್ರದರ್ಶನವನ್ನು ವೀಕ್ಷಿಸಿ ಸಂತಸಪಟ್ಟರು.

ಕಾರ್ಯಕ್ರಮದ ಮುಖ್ಯವೇದಿಕೆಯಲ್ಲಿ ಬೀಜ ಮೇಳ, ಫಲ, ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಶನಿವಾರ ಧಾರವಾಡ ಅಷ್ಟೇ ಅಲ್ಲದೇ ಹಾವೇರಿ, ಗದಗ, ಬೆಳಗಾವಿ, ರಾಯಚೂರು ಸೇರಿದಂತೆ ಅನೇಕ ಕಡೆಗಳಿಂದ ರೈತರು ಆಗಮಿಸಿದ್ದರು. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನೂರಾರು ಸ್ಟಾಲ್‌ಗಳನ್ನು ಹಾಕಲಾಗಿದ್ದು, ವಿವಿಧ ಜನೋಪಯೋಗಿ ವಸ್ತುಗಳು ಮಾರಾಟಕ್ಕಾಗಿ ಬಂದಿವೆ. ಅಲ್ಲದೇ ಕೃಷಿ ಯಂತ್ರೋಪಕರಣಗಳು, ಕೃಷಿ ಕ್ಷೇತ್ರದಲ್ಲಿ ಆವಿಷ್ಕಾರಗೊಂಡ ತರಹೇವಾರಿ ಯಂತ್ರೋಪಕರಣಗಳು ಈಗಾಗಲೇ ಬಂದಿದ್ದು, ರೈತರು ಅವುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃಷಿ ಮೇಳ ಉದ್ಘಾಟಿಸಲಿದ್ದು, ಭಾನುವಾರವಾದ್ದರಿಂದ ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬರುವ ನಿರೀಕ್ಷೆ ಇದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/09/2022 09:04 am

Cinque Terre

89.94 K

Cinque Terre

0

ಸಂಬಂಧಿತ ಸುದ್ದಿ