ಧಾರವಾಡ : ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೃಷಿ ಮೇಳ ಈ ವರ್ಷ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ರೈತ ಮಿತ್ರರ ಧ್ವನಿಯಾಗಿ ರೈತರ ಕೃಷಿ ಚಟುವಟಿಕೆಗೆ ಸಹಾಯಕವಾಗುವ ಯಂತ್ರೋಪಕರಣಗಳು ಸೇರಿದಂತೆ ಹಲವು ರೈತರ ಉಪಕರಣಗಳು ಇಂದು ಮೇಳದಲ್ಲಿ ಕಂಡು ಬಂದವು.
ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಮೇಳದಲ್ಲಿ ಶನಿವಾರ ನಾನಾ ರೀತಿಯ ರೈತರ ಕೃಷಿ ಚಟುವಟಿಕೆಯ ಯಂತ್ರೋಪಕರಣಗಳು, ಬೀಜ, ಗೊಬ್ಬರ ಸೇರಿದಂತೆ ಹಲವು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ಬೀಜ ಘಟಕದಲ್ಲಿ ಬೀಜ ಮಾರಾಟ ಮಳಿಗೆಯನ್ನು ತೆರೆಯಲಾಗಿತ್ತು. ಹಿಂಗಾರು ಬಿತ್ತನೆಗಾಗಿ ರೈತರು ಬೀಜ ಖರೀದಿಗೆ ಮೇಳಕ್ಕೆ ಆಗಮಿಸಿದ್ದರು.
ಇನ್ನು ಇಂದಿನಿಂದ ಆರಂಭವಾದ ಬೀಜ ಮಾರಾಟ ಮಳಿಗೆಯಲ್ಲಿ ಕುಸುಬೆ, ಕಡಲೆ ಹಾಗೂ ಜೋಳ ಅಧಿಕವಾಗಿ ಮಾರಾಟವಾಗುತ್ತಿದೆ. ಅದರೊಂದಿಗೆ ಗೋಧಿ, ಅಗಸಿ ಸೇರಿದಂತೆ ಎಲ್ಲಾ ರೀತಿಯ ಬೀಜಗಳನ್ನು ಸಹ ಮಾರಾಟ ಮಾಡಲಾಗುತ್ತಿದ್ದು, ಗುಣಮಟ್ಟದ ಬೀಜವನ್ನು ಕೃಷಿ ವಿಶ್ವ ವಿದ್ಯಾಲಯದ ಬೀಜ ಘಟಕದಲ್ಲಿ ಸಂಗ್ರಹ ಮಾಡಲಾಗಿದೆ.
ಇದರೊಂದಿಗೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವಂತೆ ತರಬೇತಿ ಸಹ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಇನ್ನು ಮೂರು ದಿನಗಳವರೆಗೆ ನಡೆಯಲಿರುವ ಮೇಳದಲ್ಲಿ ಬೀಜಗಳನ್ನು ಮಾರಾಟ ಮಾಡಲಾಗುವುದು.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ಧಾರವಾಡ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/09/2022 10:16 pm