ಕುಂದಗೋಳ: ಕೃಷಿ ಕ್ಷೇತ್ರ ಅತಿವೃಷ್ಟಿ ಸುಳಿಗೆ ಸಿಲುಕಿ ಯಾತನೆ ಪಡುತ್ತಿರುವ ದಿನಗಳಲ್ಲಿ ಇಲ್ಲೊಬ್ಬ ರೈತ ಅದೇ ಕೃಷಿ ಬದುಕನ್ನು ಹೊಸ ಮಾರ್ಗದ ಮೂಲಕ ಅರಳುವಂತೆ ಮಾಡಿ ಲಾಭದ ಜೊತೆಗೆ ಹೊಸ ಉಪಾಯ ಸಹ ಕಂಡುಕೊಂಡಿದ್ದಾರೆ.
ಮೂಲತಃ ಒಣ ಬೇಸಾಯದ ನಾಡಾದ ಕುಂದಗೋಳದಲ್ಲಿ ಇದೇ ಮೊದಲ ಬಾರಿಗೆ ವಿಶಿಷ್ಟ ಪ್ರಯೋಗ ಮಾಡಿದ ರೈತ ಶಂಕ್ರಪ್ಪ ಭೈರಪ್ಪನವರ 15 ಗುಂಟೆ ಚೆಂಡು ಹೂ, 80 ಕುರಿ- ಮೇಕೆ ಸಾಕಾಣಿಕೆಯ ಶೆಡ್ ನಿರ್ಮಿಸಿ ಕೃಷಿಯನ್ನು ವಾಣಿಜ್ಯೀಕರಣ ಮಾಡಿ ಲಾಭಾಂಶ ಕಂಡಿದ್ದಾರೆ.
ಸದ್ಯ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಬಳಿ ಇರುವ ತಮ್ಮ ಜಮೀನಿನಲ್ಲಿ ಕುರಿ- ಮೇಕೆ ಸಾಕಾಣಿಕೆ ಶೆಡ್ ನಿರ್ಮಿಸಿ ಬಿಟೆಲ್, ಶಿರೋಹಿ, ಮೌಳಿ, ಜಮನಾಪುರಿ, ಉಸ್ಮಾನಬಾದ ತಳಿಯ ಕುರಿ- ಮೇಕೆ ಸಾಕಿ ಈಗಾಗಲೇ ಒಂದು ಯೂನಿಟ್ ಮಾರಾಟ ಮಾಡಿ ಲಾಭ ಕಂಡಿದ್ದಾರೆ.
ಅದರಂತೆ 500 ಕೋಳಿಮರಿ ಹಾಗೂ 15 ಗುಂಟೆ ಚೆಂಡು ಹೂ ಪ್ರದೇಶದಿಂದ 1 ಕ್ವಿಂಟಾಲ್ 60 ಕೆಜಿ ಚೆಂಡು ಹೂ ಮಾರಾಟ ಮಾಡಿ ನಿವ್ವಳ ಆದಾಯ ಮಾರ್ಗ ಕಂಡುಕೊಂಡು 5 ಲಕ್ಷ ಖರ್ಚು ಮಾಡಿ ಕಟ್ಟಿದ ಕುರಿ- ಮೇಕೆ ಶೆಡ್ ನಿಂದ ಹಂತ ಹಂತವಾಗಿ ಲಾಭ ಪಡೆಯುತ್ತಾ ಖುಷಿಯ ಜೀವನ ನಡೆಸುತ್ತಿದ್ದಾರೆ.
ಒಟ್ಟು 13 ಎಕರೆ ಜಮೀನು ಹೊಂದಿದ ಶಂಕ್ರಪ್ಪ ಹೆಸರು, ಶೇಂಗಾ, ಹತ್ತಿ ಬೆಳೆ ಬೆಳೆದು ಜೊತೆಗೆ ಈ ನೂತನ ಕೃಷಿಯಲ್ಲೂ ಜಯ ಕಂಡು ಅದೆಷ್ಟೋ ಉತ್ಸಾಹಿ ಆಸಕ್ತ ರೈತರಿಗೆ ಮಾರ್ಗದರ್ಶನ ಸಹ ಮಾಡ್ತಾ ಇದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ: ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/08/2022 07:48 pm