ಅಳ್ನಾವರ:ರಾಜ್ಯಾದ್ಯಂತ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ರಾಜ್ಯಕ್ಕೆ ರಾಜ್ಯವೇ ತತ್ತರಿಸಿ ಹೋಗಿದೆ.ಇದಕ್ಕೆ ಅಳ್ನಾವರ ತಾಲೂಕೇನು ಹೊರತಲ್ಲ.ವಿಪರೀತವಾಗಿ ಸುರಿಯುತ್ತಿರುವ ಮಳೆಗೆ ಬೆಳೆದ ಬೆಳೆಗಳೆಲ್ಲಾ ನಿಂತ ನೀರಾಗಿ ಹೋಗಿವೆ.
ಅರೆಮಲ್ನಾಡಿನ ಈ ಭಾಗದ ಪ್ರಮುಖ ಬೆಳೆ ಎಂದರೆ ಕಬ್ಬು ಮತ್ತು ಗೋವಿನ ಜೋಳ. ಹಾಗೇನೆ ಭತ್ತ ಹಾಗೂ ಹತ್ತಿ ಅಂತೂ ಅಷ್ಟಕ್ಕಷ್ಟೇ.ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಬೆಳೆದ ಬೆಳೆಗಳೆಲ್ಲಾ ಜಲ ಸಮಾಧಿಯಾಗಿವೆ.ಈ ಭಾಗದ ಬಹುಪಾಲು ಜನರು ರೈತಾಪಿವರ್ಗಕ್ಕೆ ಸೇರಿದವರೆ.ಬಿಟ್ಟು ಬಿಡದೆ ಸುರಿಯುತ್ತಿರುವ ಈ ಮಳೆಗೆ ರೈತರೆಲ್ಲರು ಕಂಗಾಲಾಗಿ ಹೋಗಿದ್ದಾರೆ.
ಈಗ ಸುರಿಯುತ್ತಿರುವ ಮಳೆಯು ಕಡಿಮೆಯಾಗದಿದ್ದರೆ, ಅಲ್ಪಸ್ವಲ್ಪ ಬಂದ ಬೆಳೆಯು ಕೈಗೆ ಬರದಂತಾಗುವದು.ಬೆಳೆಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಜನರಿಗೆ ಈ ಮಳೆಯಂತೂ ಕಂಟಕವಾಗಿ ಪರಿಣಮಿಸಿದೆ.
ಮಹಾಂತೇಶ ಪಠಾಣಿ,ಪಬ್ಲಿಕ್ ನೆಕ್ಸ್ಟ್, ಅಳ್ನಾವರ
Kshetra Samachara
07/08/2022 06:51 pm