ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: 70ರಲ್ಲೂ ಕೃಷಿ ಹೊಂಡ ನೆರವಿನ ಬೇಸಾಯ; ವಾರ್ಷಿಕ 3 ಲಕ್ಷ ಆದಾಯ

ನವಲಗುಂದ: ಇಲ್ಲಿ ಅರವತ್ತಾದ್ರೇ ನಿವೃತ್ತಿ ಇಲ್ಲಾ, ವಯಸ್ಸಾದಂತೆ ದುಡಿಯುವ ಛಲ ಹೆಚ್ಚುತ್ತಲೇ ಇರುತ್ತೆ. ಕೃಷಿಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ದುಪ್ಪಟ್ಟಾಗುತ್ತಲೇ ಹೋಗುತ್ತೆ. ಹೀಗೆ ತಮ್ಮ 71ರ ಇಳಿವಯಸ್ಸಿನಲ್ಲೂ ಕೃಷಿ ಕಾಯಕದಲ್ಲೇ ಜಯ ಕಂಡವರೇ ರೈತ ಮಲ್ಲನಗೌಡ ಗಿರಿಯಪ್ಪಗೌಡರ ಇಂದಿನ ದೇಶ್ ಕೃಷಿ ಸಂಚಿಕೆ ಸಾಧಕ.

ನವಲಗುಂದ ತಾಲೂಕಿನ ಬೆಳವಟಿಗಿ ಗ್ರಾಮದ ಹಿರಿಯ ರೈತ ಮಲ್ಲನಗೌಡ ಗಿರಿಯಪ್ಪ ಗೌಡರ, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ತಮ್ಮ 4 ಎಕರೆ ಜಮೀನಿನಲ್ಲಿ 100/100 ಸುತ್ತಳತೆಯ ಕೃಷಿ ಹೊಂಡ ನಿರ್ಮಿಸಿಕೊಂಡು ವಾಣಿಜ್ಯ, ತೋಟಗಾರಿಕೆ ಬೆಳೆಗಳನ್ನು ಬೆಳೆದು ಲಾಭ ಕಂಡಿದ್ದಾರೆ.

ಒಣ ಬೇಸಾಯದ ಕೃಷಿ ಮರೆಸಿದ ಕೃಷಿ ಹೊಂಡ ರೈತರ ಬಾಳಲ್ಲಿ ಯಾವ ಬದಲಾವಣೆ ತಂದಿದೆ ? ಆದಾಯದಲ್ಲಿ ಯಾವ ರೀತಿ ಏರಿಕೆ ನೀಡಿದೆ ? ಎಂಬುದರ ಕುರಿತು ಪ್ರಗತಿ ಪರ ರೈತ ಮಲ್ಲನ ಗೌಡ ಗಿರಿಯಪ್ಪ ಗೌಡರ ಜೊತೆ ನಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ...

ಒಟ್ಟಿನಲ್ಲಿ ಮಣ್ಣಿನ ಮಗನನ್ನು ಶ್ರೀಮಂತಗೊಳಿಸುವಲ್ಲಿ ದೇಶಪಾಂಡೆ ಫೌಂಡೇಶನ್ ಕೃಷಿ ಹೊಂಡ ಬೇಸಾಯಕ್ಕೆ ನೆರವಾಗಿ ರೈತ ಮಲ್ಲನಗೌಡರ ಗಿರಿಯಪ್ಪ ಗೌಡರಿಗೆ ವಾರ್ಷಿಕ 3 ಲಕ್ಷ ಆದಾಯ ನೀಡಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/07/2022 09:04 pm

Cinque Terre

167.25 K

Cinque Terre

1

ಸಂಬಂಧಿತ ಸುದ್ದಿ