ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಬಸವನ‌ ಗೌಡ ಕೃಷಿ ಬದುಕಿಗೆ ಬಂಗಾರವಾಯ್ತು ಕೃಷಿ ಹೊಂಡ

ನವಲಗುಂದ : ಕೃಷಿ ಎಂದ್ರೇ ಬೆವರಿನ ಫಲ, ಅಂತಹ ಫಲದ ಕಾಯಕದಲ್ಲಿ ನಿರತ ಅನ್ನದಾತನ ಏಳ್ಗೆಗೆ ಕೃಷಿಹೊಂಡ ಕಾರಣವಾಗಿ ಹತ್ತು ಎಕರೆ ಜಮೀನಿನಲ್ಲಿ ವಾರ್ಷಿಕ ಆರು ಲಕ್ಷ ಆದಾಯಕ್ಕೆ ಕಾರಣವಾಗಿದೆ‌.

ಹೌದು ! ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡು ಪರ್ಯಾಯ ಬೆಳೆ ಬೆಳೆಯುವ ಮಾರ್ಗ ಅನುಸರಿಸಿ ಸಾಧನೆ ಪಥ ಏರಿದ ನವಲಗುಂದ ತಾಲೂಕಿನ ಅಮರಗೋಳದ ಮಾದರಿ ರೈತ ಬಸನಗೌಡ ಮಲ್ಲನಗೌಡ ಮುದಿಗೌಡರ ಇವತ್ತಿನ ದೇಶ್ ಕೃಷಿ ಹಿರೋ.

ತಮ್ಮ ಹತ್ತು ಎಕರೆ ಜಮೀನಿಗೆ ಆಶ್ರಯವಾಗಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಾಣದ ಜಲಧಾರೆ ಮೂಲಕ ಮುಖ್ಯವಾಗಿ 20 ಗುಂಟೆ ಜಮೀನಲ್ಲಿ ಪರೀಕ್ಷೆಗಾಗಿ ಬದನೆಕಾಯಿ, ಟೊಮೆಟೊ, ಸೇವಂತಿ, ಮೆಣಸಿನಕಾಯಿ ಬೆಳೆದ ಇವರು ಲಕ್ಷ ಆದಾಯದ ಖುಷಿ ಕಂಡಿದ್ದಾರೆ.

ಒಂದೇ ಒಂದು ಕೃಷಿಹೊಂಡ ಆಶ್ರಿತವಾಗಿ ಗೋಧಿ, ಜೋಳ, ಕಡಲೆ, ಹತ್ತಿಯಂತಹ ವಾಣಿಜ್ಯ ಬೆಳೆಗಳ ಜೊತೆ ತೋಟಗಾರಿಕೆ ಬೆಳೆಗಳಿಗೂ ಪ್ರಾಶಸ್ತ್ಯ ನೀಡಿ ಇಂದು ಅಧಿಕ ಲಾಭದ ಮಾರ್ಗ ಅನುಸರಿಸಿದ್ದಾರೆ.

ಅದರಂತೆ ಕೃಷಿಹೊಂಡ ಆಶ್ರಿತ ಬೇಸಾಯ, ಮಳೆ ಇರದ ದಿನಗಳಲ್ಲಿ ಕೃಷಿಗೆ ಜಲ ಬೇಕಾದ ಸಂದರ್ಭ ಜೀವಧಾರೆಯಾಗಿ ಅನುಕೂಲ ಎಂಬುದನ್ನು ಇವರ ಕೃಷಿ ಬದುಕು ಸಾಬೀತು ಮಾಡಿದೆ‌.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/06/2022 05:07 pm

Cinque Terre

153.2 K

Cinque Terre

0

ಸಂಬಂಧಿತ ಸುದ್ದಿ