ಪಬ್ಲಿಕ್ ನೆಕ್ಸ್ಟ್ ವಿಶೇಷ : ವೀರೇಶ ಹಾರೊಗೇರಿ
ಕಲಘಟಗಿ : ಹೇಳೋದಕ್ಕೆ ಇದು ಮಲೆನಾಡು. ಭತ್ತದ ಕಣಜ ಎಂದು ಖ್ಯಾತಿ ಪಡೆದ ಧಾರವಾಡ ಜಿಲ್ಲೆ. ವರ್ಷಗಳು ಗತಿಸಿದಂತೆ ಭತ್ತದ ಕೃಷಿ ಮಾಯವಾಗಿ ಎಲ್ಲಿ ನೋಡಿದರೂ ಕಬ್ಬಿನ ಬೆಳೆ ಗೋಚರವಾಗುತ್ತಿದೆ.
ಹೌದು, ಹಚ್ಚ ಹಸಿರಿನ ತಾಣ. ಮೈ ತುಂಬಾ ಹಸಿರು ಸೀರೆ ಉಟ್ಟಂತೆ ಬಾಸವಾಗುತ್ತಿರುವ ಕಬ್ಬಿನ ಗದ್ದೆ. ಈ ದೃಶ ಕಂಡು ಬಂದಿದ್ದು, ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ.
ಕಲಘಟಗಿ ತಾಲೂಕಿನಾದ್ಯಂತ ಸುಮಾರು 89 ಹಳ್ಳಿಗಳಿದ್ದು, ಪ್ರತಿಯೊಂದು ಹಳ್ಳಿಗಳಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಪ್ರತಿಶತಃ 75 ರಷ್ಟು, ಬತ್ತದ ಬೆಳೆಯನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಿದ್ದರು. ಆದರೆ ಭತ್ತದ ಬೆಳೆಗೆ ಸಮರ್ಪಕ ಬೆಲೆ ಸಿಗದೆ ಕಾರಣ, ರೈತರು ಭತ್ತ ಬಿಟ್ಟು, ವಾಣಿಜ್ಯ ಬೆಳೆ ಕಬ್ಬಿನ ಬೆಳೆಯಲು ಮುಂದಾಗಿದ್ದಾರೆ.
ಸದ್ಯ ಪ್ರತಿ ಕ್ವಿಂಟಲ್ ಭತ್ತಕ್ಕೆ 1800 ಇದೆ. ಆದರೆ ಕಬ್ಬಿನ ಬೆಲೆ ಪ್ರತಿ ಟನ್ ಗೆ 2600 ರಿಂದ 2800 ವರೆಗೆ ಇರುವುದರಿಂದ, ಪ್ರತಿ ಎಕರೆಗೆ ಖರ್ಚು ವೆಚ್ಚ ತಗೆದು ಕಬ್ಬಿನ ಬೆಳೆಯಿಂದ 50 ಸಾವಿರ ವರೆಗೆ ಉಳಿತಾಯವಾಗುತ್ತಿದೆ. ಅಂತಾರೆ ತುಮರಿಕೊಪ್ಪ ಗ್ರಾಮದ ರೈತ ಈಶ್ವರ ಪಾಟೀಲ್
ಮೊದ ಮೊದಲು ಭತ್ತವನ್ನೇ ನಮ್ಮ ಪ್ರಮುಖ ಬೆಳೆಯಾಗಿಸಿಕೊಂಡಿದ್ವಿ, ಆದ್ರೆ ಭತ್ತಕ್ಕೆ ಸರಿಯಾದ ಬೆಲೆ ಸಿಗದೆ ಇರುವ ಕಾರಣ, ನಾವು ಭತ್ತ ಬಿಟ್ಟು ಕಬ್ಬು ಬೆಳೆಯುತ್ತಿದ್ದೇವೆ ಅಂತಾರೆ. ಹಿಂಡಸಗೇರಿ ಗ್ರಾಮದ ರೈತ ಚನ್ನಯ್ಯ ಹಿರೇಮಠ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/04/2022 06:04 pm