ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಇಳಿ ವಯಸ್ಸನ್ನೂ ಮರೆಸಿದ ಕೃಷಿಹೊಂಡ ಆಶ್ರಿತ ಬೇಸಾಯದ ಛಲ

ಧಾರವಾಡ : 65ರ ಇಳಿವಯಸ್ಸಿನಲ್ಲೂ ಬತ್ತದ ಕೃಷಿ ಪ್ರೇಮ, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಾಣದ ಛಲ, ನಾನು ತೋಟಗಾರಿಕೆ ಬೆಳೆ ಬೆಳೆಯ ಬಲ್ಲೆ ಎಂಬ ನವೋತ್ಸಾಹ.

ರೈತರಲ್ಲಿನ ಕೃಷಿ ಪ್ರೀತಿಗೆ ಹೊಸ ಅವಕಾಶ, ದುಡಿಯುವ ಕೈಗಳಿಗೆ ಪ್ರೋತ್ಸಾಹ ತುಂಬಿ ದೇಶಪಾಂಡೆ ಫೌಂಡೇಶನ್, ಕೃಷಿಹೊಂಡದ ಕೊಡುಗೆ ನೀಡಿ ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮದ ರೈತ ಹುಸೇನಸಾಬ್ ಬುಡ್ಡಿಮ್ಮನವರಿಗೆ ಇಳಿ ವಯಸ್ಸಿನಲ್ಲೂ ಸಾಧನೆಯ ಬಲ ತುಂಬಿದೆ.

ಅದರಂತೆ ಹುಸೇನಸಾಬ್ ಬುಡ್ಡಿಮ್ಮನವರ ತಮ್ಮ 5 ಎಕರೆ ಜಮೀನಿನಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿ ಒಣ ಬೇಸಾಯದ ಬೆಳೆಗಳ ಜೊತೆ ತೋಟಗಾರಿಕೆ ಬೇಸಾಯಕ್ಕೆ ತಲೆದೂಗಿದ್ದಾರೆ.

ಇಷ್ಟು ದಿನ ಬೇಸಾಯದಲ್ಲಿ ಮುಂಗಾರು ಕೆಂಪು ಹುಳ್ಳಿ, ಹೆಸರು ಹತ್ತಿ ಬೆಳೆಗೆ ಸೀಮಿತವಾದ ರೈತರು ಇದೀಗ ಕೃಷಿಹೊಂಡ ನಿರ್ಮಿಸಿಕೊಂಡು ತೋಟಗಾರಿಕೆ ತರಕಾರಿ, ರೇಷ್ಮೆ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ರೈತ ಹುಸೇನಸಾಬ್ ಬುಡ್ಡಿಮ್ಮನವರ ತಮ್ಮ 65ನೇ ವಯಸ್ಸಿನಲ್ಲಿ ಚಿರ ಯುವಕರನ್ನು ಮೀರಿಸುವ ಛಲ, ಆಕಾಂಕ್ಷೆ, ಹುಮ್ಮಸ್ಸು, ಸಾಧನೆ ಪಥದಲ್ಲಿ ನಡೆಯಲು ಕೈ ಹಿಡಿಯಲಿದೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

25/04/2022 09:02 pm

Cinque Terre

195.56 K

Cinque Terre

0

ಸಂಬಂಧಿತ ಸುದ್ದಿ